-
- ಪಾಂಗಾಳ ವಿಠ್ಠಲ್ ಶೆಣೈ - ನಾನು ಕಂಡ0ತೆ
ಮೂಲಕ ಬರೆದಿದ್ದಾರೆ -ಶ್ರೀ ಜೋನ್ ಲೋಬೊ,
೧೯೬೦ರ ದಶಕದ ಆರಂಭಿಕ ವರ್ಷಗಳಲ್ಲಿ ಇನ್ನಂಜೆ ಎಸ್.ವಿ.ಎಚ್ ಪ್ರೌಢ ಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಪಾಂಗಾಳ ವಿಠ್ಠಲ್ ಶೆಣೈ ನನ್ನ ಶಿಕ್ಷಕರಾಗಿದ್ದರು. ಚಿತ್ರಕಲಾ ಶಿಕ್ಷಕನಾಗಿ ಸೇವೆಗೆ ಸೇರಿದವರು ಖಾಸಗಿಯಾಗಿB.A ಮತ್ತು Bachelor of Training(BT) ಪದವಿಯನ್ನು ಪಡೆದು ಮುಂದೆ ಕನ್ನಡದಲ್ಲಿ M.A ಸ್ನಾತಕೋತ್ತರ ಪದವಿಯನ್ನು ಪಡೆದರು. ಹೀಗೆ ಚಿತ್ರಕಲಾ ಶಿಕ್ಷಕನಾಗಿ ಸೇರಿದವರು ಸಹಾಯಕ ಶಿಕ್ಷಕನಾಗಿ ಮುಂದೆ ಅದೇ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. ಅದೇ ಶಾಲೆಯಲ್ಲಿ ನಾನು ಅಧ್ಯಾಪಕನಾಗಿದ್ದಾಗ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಇನ್ನಂಜೆಯಲ್ಲಿ ಅವರು ನಿವೃತ್ತರಾದ ಬಳಿಕ ಶಂಕರಪುರದಲ್ಲಿ ೧೯೮೧ರಲ್ಲಿ ನೂತನವಾಗಿ ಆರಂಭಗೊAಡ ಸೈಂಟ್ ಜೋನ್ಸ್ ಪ್ರೌಢ ಶಾಲೆಯ ಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಐದು ವರ್ಷ ಸೇವೆ ಸಲ್ಲಿಸಿದ್ದರು. ಅವರು ಹುದ್ದೆಯಿಂದ ನಿರ್ಗಮಿಸುತ್ತಿರುವಂತೆ ಅವರಿಂದಲೇ ಮುಖ್ಯೋಪಾಧ್ಯಾಯ ಹುದ್ದೆ ವಹಿಸಿಕೊಳ್ಳುವಂತಾಗಿದ್ದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ. ಈ ಅವಧಿಯಲ್ಲದೆ ಅವರ ಜೀವಿತದ ಕೊನೆಯವರೆಗೆ ಅವರೊಂದಿಗೆ ವಿವಿಧ ಸಂಘಸAಸ್ಥೆಗಳಲ್ಲಿ ದುಡಿಯುವ ಅವಕಾಶಗಳೂ ನನ್ನದಾಗಿದ್ದವು ಎನ್ನುವುದನ್ನು ತಿಳಿಸಲು ಸಂತೋಷವೆನಿಸುತ್ತದೆ.
ನೀಳಕಾಯ, ಆಕರ್ಷಕ ಮುಖದೊಂದಿಗೆ ಸದಾ ಶ್ವೇತವರ್ಣದ ಉಡುಪನ್ನು ಧರಿಸುತ್ತಿದ್ದ ಅವರನ್ನು ಸನಿಹದಿಂದ ಕಂಡAತೆ ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.
ಗುರು ವಿಠ್ಠಲ ಶೆಣೈ ಪ್ರತಿಭಾ ಸಂಪನ್ನರಾಗಿದ್ದರು. ಶೈಕ್ಷಣಿಕ ಪ್ರತಿಭೆಯ ಕಾರಣ ಅಧ್ಯಾಪನ ವೃತ್ತಿಯಲ್ಲಿದ್ದಾಗಲೂ ಉಚ್ಚ ಶಿಕ್ಷಣ ಪಡೆದಿದ್ದರು. ತಮ್ಮ ಶಿಕ್ಷಣ ಮತ್ತು ಅನುಭವ ಲಾಭವನ್ನು ತಮ್ಮ ವಿದ್ಯಾರ್ಥಿಗಳು, ಸೇವೆ ಸಲ್ಲಿಸಿದ ವಿದ್ಯಾ ಸಂಸ್ಥೆಗಳು ಮತ್ತು ಸಮಾಜಕ್ಕೆ ಧಾರೆ ಎರೆದರು. ಶಿಸ್ತು ಅವರು ಮೈಗೂಡಿಸಿಕೊಂಡ ಮತ್ತೊಂದು ಪ್ರಮುಖ ಗುಣ.
ಚಿತ್ರಕಲೆ, ಭಾಗವತಿಕೆ, ಹಾಡುಗಾರಿಕೆ, ನಾಟಕ, ನಾಯಕತ್ವ ಮತ್ತಿತ್ತರ ಹೆಚ್ಚಿನ ಪ್ರಕಾರಗಳಲ್ಲಿ ಅವರದ್ದು ಎತ್ತಿದ ಕೈ. ಅವರ ಮನೆತನವೇ ಬಾಗವತಿಕೆಗೆ ಖ್ಯಾತಿ ಪಡೆದಿತ್ತು. ಪಾಂಗಾಳ ಗುಡ್ಡೆಯ ಅವರ ಮನೆಯ ಹೆಸರೇ ‘ಭಾಗವತಾಶ್ರಮ’ ಆಗಿದೆ. ಕೊಂಕಣಿ, ಕನ್ನಡ ಸಣ್ಣ ನಾಟಕಗಳನ್ನೂ ರಚಿಸಿ ಆಡಿಸಿದ್ದರು.
ಇನ್ನಂಜೆ ಮತ್ತು ಶಂಕರಪುರ ಈ ಎರಡೂ ಕಡೆ ತಮ್ಮ ಶಾಲೆಗಳಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಅವರು ವಿಶೇಷ ಗಮನ ನೀಡಿದ್ದರು. ಆ ಕಾಲದಲ್ಲಿ ಇನ್ನಂಜೆ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಕೆಲವು ರ‍್ಯಾಂಕ್‌ಗಳು ಬಂದಿರುವುದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಕ್ರೀಡಾ ಚಟುವಟಿಕೆಗಳಲ್ಲಿ ಶಾಲೆ ಮುಂಚೂಣಿಯಲ್ಲಿತ್ತು. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕನ್ನಡ-ತುಳು ನಾಟಕಗಳಲ್ಲದೆ ಯಕ್ಷಗಾನವನ್ನೂ ಏರ್ಪಡಿಸಲಾಗುತ್ತಿತ್ತು.
ಶಂಕರಪುರದ ಸೈಂಟ್ ಜೋನ್ಸ್ ಪ್ರೌಢ ಶಾಲೆಗೆ ಅವರು ಭದ್ರ ಬನಾದಿ ಒದಗಿಸಿದರು. ಪಾಠದ ಕಡೆಗೆ ಉತ್ತಮ ಗಮನ ನೀಡಿದ ಅವರು ಪಾಠ್ಯೇತರ ಚಟುವಟುಕೆಗಳನ್ನು ಹುರಿದುಂಬಿಸಿದರು. ಆ ಕಾರಣದಿಂದ ಪ್ರೌಢ ಶಾಲೆಯ ಆರಂಭದಲ್ಲೇ ತಾಲೂಕುಮಟ್ಟದ ಕ್ರೀಡಾಕೂಟ ಜರಗಿಸಲು ಸಾಧ್ಯವಾಗಿತ್ತು.
ಇನ್ನಂಜೆಯಲ್ಲಿರುವಾಗಲೇ ಶೆಣೈಯವರು ಶಿರ್ವ ರೋಟರಿ ಸಂಸ್ಥೆಯ ಸಕ್ರಿಯ ಸದಸ್ಯ ಮತ್ತು ಪದಾಧಿಕಾರಿಯಾಗಿದ್ದರು. ರೋಟರಿಯ ವಿದ್ಯಾರ್ಥಿ ಘಟಕವಾದ INTERACT ವಿಭಾಗವನ್ನು ತಮ್ಮ ಶಾಲೆಗಳಲ್ಲಿ ಆರಂಭಿಸಿದ್ದರು. ತಮ್ಮ ಜೀವಿತದ ಕೊನೆಯವರೆಗೂ ರೋಟರಿಯಲ್ಲಿ ಸಕ್ರಿಯರಾಗಿದ್ದ ಅವರನ್ನು ‘ರೋಟರಿ ಭೀಷ್ಮ’ ಎಂದೇ ಸಂಬೋಧಿಸಲಾಗುತ್ತಿತ್ತು.
ಸ್ವತಃ ಕೃಷಿಕರಾಗಿದ್ದ ಶೆಣೈಯವರು ಮಣಿಪಾಲದ ಸಿಂಡಿಕೇಟ್ ಕೃಷಿ ಪ್ರತಿಷ್ಟಾನದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದರ ಮೂಲಕ ವಿವಿದೆಡೆ ಕೃಷಿಕ ಸಂಘ, ಭಾವೀ ಕೃಷಿಕ ಸಂಘ ಮತ್ತು ವಿದ್ಯಾರ್ಥಿ ಕೃಷಿಕ ಸಂಘಗಳ ಆರಂಭಕ್ಕೆ ಕಾರಣರಾಗಿದ್ದರು.
ತಮ್ಮ ಊರು ಪಾಂಗಾಳದಲ್ಲಿ ವಿದ್ಯಾವರ್ಧಕ ಪ್ರೌಢಶಾಲೆಯ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದು ಹಲವಾರು ವರ್ಷ ಆ ಶಾಲೆಯನ್ನು ಮುನ್ನಡೆಸಿದ್ದರು. ಪಾಂಗಾಳ ಜನಾರ್ದನ ದೇವಸ್ಥಾನದ ಚಟುವಟಿಕೆಗಳಲ್ಲಿಯೂ ದುಡಿದಿದ್ದರು.
ಕಟ್ಟಿಕೆರೆ ಜಲಕ್ರೀಡಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದು, ಪುರಾತನ ಕಟ್ಟಿಕೆರೆಯಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳ ಸಂಘಟಣೆಯಲ್ಲಿ ಮಾರ್ಗದರ್ಶನ ನೀಡಿದ್ದರು.
ಪಾಂಗಾಳ ವಿಠ್ಠಲ ಶೆಣೈಯವರ ಬಗ್ಗೆ ಪುಸ್ತಕವನ್ನೇ ಬರೆಯುವಷ್ಟು ವಿಷಯಗಳಿವೆ. ಆದರೆ ಅದು ಇಲ್ಲಿ ಸಾಧ್ಯವಾಗದ ಕಾರಣ ಇಲ್ಲಿ ಇಷ್ಟನ್ನೇ ಹೇಳಿ ಕೊನೆಗೊಳಿಸುತ್ತಿದ್ದೇನೆ. ಶೆಣೈಯವರು ತಮ್ಮ ಬಹುಮುಖ ಚಟುವಟಿಕೆಗಳ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರಪರಿಚಿತರಾಗಿದ್ದರು.
-ಶ್ರೀ ಜೋನ್ ಲೋಬೊ,
ನಿವೃತ್ತ ಮುಖ್ಯೋಪಾಧ್ಯಾಯ,
ಸೇಂಟ್ ಜಾನ್ಸ್ ಪ್ರೌಢಶಾಲೆ - ಕನ್ನಡ ಮಾಧ್ಯಮ ಶಂಕರಪುರ
ಸೈಂಟ್ ಜೋನ್ಸ್ ಪ್ರೌಢ ಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರು - ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಮಾರ್ಗದರ್ಶಕರು ಶ್ರೀ ಪಾಂಗಾಳ ವಿಟ್ಠಲ್ ಶೆಣೈ
ಮೂಲಕ ಬರೆದಿದ್ದಾರೆ ಕ್ಲಾರಾ .ವಿ. ಮೆಂಡೋನ್ಸ
ನಮ್ಮ ಸೈಂಟ್ ಜೋನ್ಸ್ ಪ್ರೌಢ ಶಾಲೆಯು ಪ್ರಾರಂಭವಾದ ಒಂದೇ ತಿಂಗಳಲ್ಲಿ ಅಂದರೆ ಜುಲೈ ೧, ೧೯೮೧ ರಂದು ಪೂರ್ಣ ಅನುಭವಿ ಸಮರ್ಥ ನಿವೃತ್ತ ಶಿಕ್ಷಕ ಪಿ. ವಿಟ್ಠಲ್ ಶೆಣೈಯವರ ಸೇವೆ ದೊರಕಿದ್ದು ಸುದೈವ ಎಂದೇ ಹೇಳಬಹುದು.ದಿವಂಗತ ಶ್ರೀ ಪಿ. ವಿಟ್ಠಲ್ ಶೆಣೈಯವರು ಇನ್ನಂಜೆ ಎಸ್.ವಿ.ಎಚ್ ಪ್ರೌಢ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಿಗೆ ಸೇವೆ ಸಲ್ಲಿಸಿದವರು. ನಮ್ಮ ಶಂಕರಪುರದ ವಿದ್ಯಾರ್ಥಿಗಳಿಗೆ ವಿಧ್ಯಾಧಾನ ಮಾಡಿದ ಗುರು ಶಂಕರಪುರದ ಜನರಿಗೆ ಪರಿಚಿತರು. ಅವರು ನಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ನೀಡಿದ ಸುಮಾರು ೭ ವರ್ಷಗಳ ಸೇವೆಯು ಈ ಶಾಲೆಗೆ ಭದ್ರ ಬುನಾದಿಯನ್ನು ಒದಗಿಸಿಕೊಟ್ಟಿತು.
ಅವರು ಉಡುವ ಬಿಳಿ ಜುಬ್ಬ ಹಗೂ ಬಿಳಿ ದೋತಿ (ಕಚ್ಚೆ) ಹೆಗಲ ಮೇಲೆ ಇರುವ ಒಂದು ಬಿಳಿ ಶಾಲು, ಅವರು ಎಲ್ಲಿದ್ದರೂ ಗುರುತಿಸುವಂತಹದು ಹಾಗೂ ಭಯ ಭಕ್ತಿಯಿಂದ ನಮಸ್ಕರಿಸುವಂತಹದು.
ನಮ್ಮ ಪ್ರೌಢಶಾಲೆಗೆ ಅವರು ಮುಖ್ಯೋಪಾಧ್ಯಾಯರಾಗಿ ಬಂದಾಗ, ನಾನು ಅವರನ್ನು ಮೊದಲು ಕಂಡದ್ದು. ಅವರ ಕಠಿಣ ಶಿಸ್ತಿನ ಬಗ್ಗೆ ಕೇಳಿದ್ದೆ. ಅವರು ಅನುಭವಿ ಶಿಕ್ಷಕರು. ನಾವು ಶಿಕ್ಷಕವೃತ್ತಿಯನ್ನು ಪ್ರಾರಂಭಿಸಿದವರು. ಅವರ ಹಾಗೂ ನಮ್ಮ ಮಧ್ಯೆ ಪ್ರಾಯದ ಅಂತರ, ಹಾಗೂ ಅನುಭವದ ಅಂತರ.
ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳಿಗೆ ಎಲ್ಲವೂ ಹೊಸತು, ನಮಗೆ ಶಿಕ್ಷಕರಿಗೆ ಕೂಡ ಎಲ್ಲವೂ ಹೊಸತು. ವಿದ್ಯಾರ್ಥಿಗಳ ಹಾಗೆ ನಾವು ಮುಖ್ಯೋಪಾಧ್ಯಾಯರಿಂದ ಕೇಳಿ ಕಲಿಯುತ್ತಿದ್ದೆವು.
ಕೆಲವೊಮ್ಮೆ ಮುಖ್ಯೋಪಾಧ್ಯಾಯರು ಹೇಳುವುದಿತ್ತು “ನಾನು ಮಕ್ಕಳಿಗೆ ಕಲಿಸುವುದೋ! ನಿಮಗೆ ಕಲಿಸುವುದೋ! ಒಂದು ತಿಳಿಯುತ್ತಿಲ್ಲ ಎಂದು. ಕಠಿಣಶಿಸ್ತು ಹಾಗೂ ದೃಢ ನಿರ್ಧಾರದ ಸ್ವಭಾವ ಅವರದು.
ಅವರ ಜೀವನ ತುಂಬಾ ಪರಿಶ್ರಮದಿಂದ ಕೂಡಿದ ಸರಳ ಜೀವನವಾಗಿತ್ತು. ತಮ್ಮ ಪುತ್ರ-ಪುತ್ರಿಯರಿಗೆ ಉತ್ತಮ ವಿದ್ಯಾಭ್ಯಾಸ ನೀಡಿದ್ದರು. ಅವರು ಒಬ್ಬ ಕೃಷಿಕರು. ಬೆಳಗ್ಗಿನ ಗದ್ದೆಯ ಕೆಲಸ ಮುಗಿಸಿ ಪಾಂಗಾಳದಿAದ ಶಂಕರಪುರ ಶಾಲೆಯವರೆಗೆ, ಸೈಕಲಿನಲ್ಲಿಯೇ ಬರುತ್ತಿದ್ದರು. ಬೆಳಗ್ಗಿನ ಗಂಜಿ ಊಟ ಸೇವಿಸಿ ಬಂದ ಅವರು ೧೧.೩೦ ಗಂಟೆಗೆ ಹೋಟೆಲಿಗೆ ಹೋಗಿ ಬಾಳೆಹಣ್ಣು ತಿಂದು ಚಹಾ ಕುಡಿದರೆ, ನಂತರ ಅವರ ತಿಂಡಿ ಸಾಯಂಕಾಲ ಮನೆಗೆ ಹೋದ ನಂತರ.
ಆರAಭದ ಮೊದಲ ವರ್ಷ, ಮುಖ್ಯೋಪಾಧ್ಯಾಯರು ಮತ್ತು ನಾವು ಶಿಕ್ಷಕ-ಶಿಕ್ಷಕೇತರರು ಒಂದೇ ರೂಮಿನಲ್ಲಿ ಎದುರು ಬದುರು ಕುಳಿತುಕೊಳ್ಳುತ್ತಿದ್ದೆವು. ಅವರ ಎದುರಿನಲ್ಲಿ ನಾವು ಪಾಠ ತಯಾರಿಸುವುದು ಮತ್ತು ಕ್ಲಾಸಿಗೆ ಹೋಗುವುದು, ನಮಗೆ ಶಿಕ್ಷಕರ ಕೋಣೆ ಇರಲಿಲ್ಲ. ಏನೂ ಪರಸ್ಪರ ಮಾತನಾಡಲಿಕ್ಕೆ ಇದ್ದರೆ ನಾವು ಹೊರಗೆ ಹೋಗಿ ಮಾತನಾಡುತ್ತಿದ್ದೆವು. ಅವರ ಎದುರಿಗೆ ಮಾತನಾಡಲಿಕ್ಕೆ ಒಂದು ರೀತಿಯ ಭಯ. ಅವರು ಎದುರಿನ ಕುರ್ಚಿಯಲ್ಲಿ ಇಲ್ಲದಾಗ ನಮ್ಮ ನಗು ಮಾತು ಜೋರಾಗಿ ಕೇಳಿಸುತ್ತಿತ್ತು. ಅವರು ತಮ್ಮ ಸೈಕಲನ್ನು ಒಂದೊAದು ದಿವಸ ಒಂದೊAದು ಕಡೆ ಇಟ್ಟು ಬರುತ್ತಿದ್ದರು. ಅವರು ಯಾವ ಕಡೆಯಿಂದ ಶಾಲೆಗೆ ಬರುತ್ತಿದ್ದರೋ ತಿಳಿಯುತ್ತಿರಲಿಲ್ಲ.
ಒಂದು ದಿನ ನಡೆದ ಘಟನೆಯು ನನಗೆ ಈಗಲೂ ನೆನಪು ಬರುತ್ತದೆ. ಶಾಲೆ ಆರಂಭವಾಗಲು ೧೫ ನಿಮಿಷ ಬಾಕಿ ಇತ್ತು. ನಾವೆಲ್ಲರೂ ಮುಖ್ಯೋಪಾಧ್ಯಾಯರ ಆಫೀಸಿನಲ್ಲಿ ಯಾವುದೋ ವಿಷಯದ ಬಗ್ಗೆ ಜೋರಾಗಿ ಮಾತನಾಡುತ್ತಿದ್ದೆವು. ದಿವಂಗತ ಅರ್ಥರ್ ರೊಡ್ರಿಗಸ್‌ರವರು ಒಂದು ವಿಷಯವನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದರು. ನಾವೆಲ್ಲರೂ ನೆಗಡುವಾಗಲೇ ಸಂಚಾಲಕರಾಗಿದ್ದ ದಿವಂಗತ ಪೂಜ್ಯ ಜಿ.ಬಿ ಡಿಸೋಜರವರು ಬಾಗಿಲ ಎದುರಿನಲ್ಲಿ ನಿಂತರು. ನಮ್ಮದು ಸ್ಮಶಾನಮೌನ “ಬೆಕ್ಕಿಲ್ಲದಿದ್ದರೆ ಇಲಿಗಳ ಕಾಟ” ಎಂದು ಹೇಳಿ ಹೋದರು. ಈ ವಾಕ್ಯವನ್ನು ನಾವು ಈಗಲೂ ನೆನೆಸಿಕೊಳ್ಳುತ್ತಿದ್ದೆವು. ಸಂಚಾಲಕರಿಗೆ ಗೊತ್ತಿತ್ತು ನಾವು ಪಿ. ವಿಟ್ಠಲ್ ಶೆಣೈರವರ ಎದುರಿಗೆ ಶಿಸ್ತಿನ ಸಿಪಾಯಿಗಳು ಎಂದು.
ಶ್ರೀ ಪಿ. ವಿಟ್ಠಲ್ ಶೆಣೈರವರ ಶಿಕ್ಷೆ ಅದೊಂದು ಬೇರೆ ರೀತಿಯದ್ದು. ವಿದ್ಯಾರ್ಥಿಗಳಿಗೆ ಹೊಡೆಯುವುದು ಅವರು ಬಲೂ ಅಪರೂಪ. ವಿದ್ಯಾರ್ಥಿಗಳು ಅಶಿಸ್ತು ತೋರಿಸಿದಾಗ ಅವರನ್ನು ನೇರವಾಗಿ ಆಫೀಸಿಗೆ ಕರೆತರುವುದು. ಅವರ ಕುರ್ಚಿಯ ಬದಿಯಲ್ಲಿ ಕುಳಿತುಕೊಳ್ಳಿಸುವುದು. ಔuಣ beಟಟ ನಲ್ಲಿ ಅವರಿಗೆ ಹೊರಗೆ ಕಳುಹಿಸಿತ್ತಿದ್ದರು. ನಂತರ ಅವರು ಅಲ್ಲೇ ಬಂದು ಕುಳಿತುಕೊಳ್ಳಬೇಕಾಗಿತ್ತು. ಕೆಲವೊಮ್ಮೆ ಒಂದು ವಾರದ ತನಕ ಇದು ನಡೆಯುತ್ತಿತ್ತು. ಈ ಶಿಕ್ಷೆ ಅನುಭವಿಸಿದ ವಿದ್ಯಾರ್ಥಿಗಳು ಮುಂದೆ ತಪ್ಪು ಮಾಡಲು ಹಿಂಜರಿಯುತ್ತಿದ್ದರು.
ಆ ಸಮಯದಲ್ಲಿ ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಛೇರಿ ಮಂಗಳೂರಿನಲ್ಲಿತ್ತು. ನಮ್ಮ ಪ್ರೌಢಶಾಲೆಗೆ ಬೇಕಾಗಿದ್ದ ಎಲ್ಲಾ ಶಿಕ್ಷಕರ ನೇಮಕ, ಅನುಮೋದನೆಯನ್ನು ಇಲಾಖೆಗೆ ಪತ್ರ ಬರೆದು ಅದನ್ನು ಮಾಡುಸುತ್ತಿದ್ದುದು ನೋಡಿದರೆ ನಮಗೆ ಆಶ್ಚರ್ಯವಾಗುತ್ತಿತ್ತು. ಲಂಚ ಕೊಟ್ಟು ಕೆಲಸ ಮಾಡಿಸುವ ಪ್ರಶ್ನೆಯೇ ಅವರಲ್ಲಿ ಇರಲಿಲ್ಲ. ಎಲ್ಲವೂ ಪತ್ರಗಳ ಮುಖಾಂತರವೇ ನಡೆದಿತ್ತು.
ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ನಾಟಕದ ಅಭಿನಯವನ್ನು ಅವರು ಕಲಿಸುತ್ತಿದ್ದರು. ಅವರಲ್ಲಿ ಅಭಿನಯದ ಅಭ್ಯಾಸ ಮಾಡಿಸಿಕೊಂಡ ವಿದ್ಯಾರ್ಥಿಗಳು ಆಗ ನಡೆದ ಘಟನೆಗಳನ್ನು ಮರೆಯುವಂತಿಲ್ಲ. ವಾರ್ಷಿಕೋತ್ಸವದ ನಂತರ ರಾತ್ರಿ ೧೨ ಗಂಟೆಗೆ ತಮ್ಮ ಸೈಕಲನ್ನೇರಿ ಅವರು ಪಾಂಗಾಳ ತಮ್ಮ ಮನೆಗೆ ಹೋಗುತ್ತಿದ್ದರು. ನಮ್ಮ ಪ್ರೌಢ ಶಾಲೆಗೆ ೧೯೮೬ರಲ್ಲಿ ಸರಕಾರದಿಂದ ಅನುದಾನ ದೊರೆಯಿತು. ನಮಗೆ ಮಂಜೂರಾತಿ ಸಿಕ್ಕಿದ್ದು ಮಾರ್ಚ್ ಮೊದಲ ವಾರದಲ್ಲಿ. ಮಾರ್ಚ್ ೩೧ರ ಒಳಗೆ ೧೦ ತಿಂಗಳ ಬಿಲ್ಲನ್ನು ತಯಾರಿಸಬೇಕಿತ್ತು. ಎಲ್ಲಾ ಲೆಕ್ಕಾಚಾರ ಮಾಡಿ ನಮ್ಮ ಮುಖ್ಯೋಪಾಧ್ಯಾಯರೇ ಎಲ್ಲಾ ಬಿಲ್ಲ್ಗಳನ್ನು ತಯಾರಿಸಿದರು. ಹಾಗೂ ಕಛೇರಿಗೆ ಕಳುಹಿಸಿದರು. ಆದರೆ ಅದರಲ್ಲಿ ಕೆಲವು ಸರಿಯಿಲ್ಲ ಎಂದು ಮಾರ್ಚ್ ೨೩ ರ ಸಂಜೆ ಹಿಂದೆ ಬಂದವು. ಮಾರ್ಚ್ ೨೫ರ ಒಳಗೆ ಅವುಗಳನ್ನು ಕಳುಹಿಸಬೇಕೆಂದು ಸೂಚನೆಯಿತ್ತು. ೨೩ ರಾತ್ರಿ ಶ್ರೀ ವಿಟ್ಠಲ್ ಶೆಣೈಯವರು ನಾನು ಹಾಗೂ ಗುಮಾಸ್ತ ಅಗಸ್ಟಿನ್ ಲೋಬೊ, ಅರ್ಥರ್ ರೊಡ್ರಿಗಸ್, ಶ್ರೀ ಸ್ಟಾö್ಯನ್ಲಿ ದಿನಮಣಿ, ಶ್ರೀ ಫ್ರಾನ್ಸಿಸ್ ಮಸ್ಕರೇನ್ಹಸ್ ಅವರ ಜೊತೆ ಕುಳಿತುಕೊಂಡು ಅವರು ತಯಾರಿಸಿಕೊಟ್ಟ ಬಿಲ್ಲಿನ ಛಿoಠಿಥಿ ಮಾಡಿಕೊಟ್ಟೆವು. ಈ ಕೆಲಸ ಆಗುವಾಗ ರಾತ್ರಿ ೨ ಗಂಟೆಗೆ, ನಮಗೆ, ಶಿಕ್ಷಕರಿಗೆ ನಮಗೆ ೧೦ ತಿಂಗಳ ಪೂರ್ತಿ ಸಂಬಳ ಸಿಗುತ್ತದೆ ಎಂಬ ಸಂತೋಷ. ಆದರೆ ಅವರು ನೀಡಿದ್ದು ನಿಸ್ವಾರ್ಥ ಸೇವೆ. ಆ ರಾತ್ರಿ ೨ ಗಂಟೆಗೆ ತಮ್ಮ ಸೈಕಲನ್ನು ಏರಿ ಪಾಂಗಾಳಕ್ಕೆ ಹೊರಟಾಗ ನಾವು ಅವರನ್ನು ತಡೆದೆವು. ಆದರೆ ಅವರು ಸೈಕಲಿನಲ್ಲಿ ಹೊರಟೇ ಬಿಟ್ಟರು.
ಇಂತಹ ಹಲವಾರು ನೆನಪುಗಳು ನಮ್ಮ ಮನಸ್ಸಿನಲ್ಲಿವೆ. ಅವರ ತರಗತಿಗಳಲ್ಲಿ ಕಲಿತ ವಿದ್ಯಾರ್ಥಿಗಳೇ ನಿಮಗೆ ಒಂದಲ್ಲ ಒಂದು ಘಟನೆ ನಿಮ್ಮ ಮನಸ್ಸಿನಲ್ಲಿ ಇದ್ದಿರಬಹುದು. ಅವರ ಕೈಕೆಳಗೆ ನಾವು ಶಿಕ್ಷಕರು ಕಲಿತ ವಿಚಾರಗಳು ಅಪಾರ. ಅವರ ೬ ವರ್ಷಗಳ ತರಬೇತಿಯಿಂದ ವಿದ್ಯಾರ್ಥಿಗಳ ಭೋದನೆ ಕಛೇರಿ ಕೆಲಸ, ಶಿಸ್ತು ಹಾಗೂ ಹಲವಾರು ವಿಷಯಗಳನ್ನು ನಾವು ಕಲಿತುಕೊಂಡೆವು.
ಅವರ ಮಗ, ಅವರೆಲ್ಲರೂ ಜೀವಿಸಿದ ಮನೆಯ ಹತ್ತಿರ ದೊಡ್ಡ ಮನೆ ಕಟ್ಟಿ ಅವರನ್ನು ಅವರ ಆನಾರೋಗ್ಯದ ಸಮಯದಲ್ಲಿ ನೆಲೆಸಲು ಕರೆದರೂ ಹೋಗದೆ, ತಾನು ಹುಟ್ಟಿ ಬೆಳೆದ ಮನೆಯಲ್ಲಿ ಅವರು ತಮ್ಮ ಕೊನೆಯುಸಿರೆಳೆದರು.
ಶ್ರೀ ಪಿ. ವಿಟ್ಠಲ್ ಶೆಣೈರವರ ಆತ್ಮಕ್ಕೆ ನಾವೆಲ್ಲರೂ ಚಿರಶಾಂತಿಯನ್ನು ಕೋರಿ, ಅವರ ಆತ್ಮಕ್ಕೆ ದೇವರು ಸದ್ಗತಿಯನ್ನು ದೊರಕಿಸಿಕೊಡಲಿ ಎಂದು ಪ್ರಾರ್ಥಿಸೋಣ.
ಕ್ಲಾರಾ .ವಿ. ಮೆಂಡೋನ್ಸನಿವೃತ್ತ ಮುಖ್ಯೋಪಾಧ್ಯಾಯಿನಿಸೇಂಟ್ ಜಾನ್ಸ್ ಪ್ರೌಢಶಾಲೆ - ಕನ್ನಡ ಮಾಧ್ಯಮ ಶಂಕರಪುರ
--------------------------------------------------------------------------------------------
ದಿ| ಪಿ. ವಿಠ್ಠಲ್ ಶೆಣೈ ನಿವೃತ್ತ ಮುಖ್ಯೋಪಾಧ್ಯಾಯರುಸೇಂಟ್ ಜಾನ್ಸ್ ಪ್ರೌಢಶಾಲೆ - ಕನ್ನಡ ಮಾಧ್ಯಮ
-
ಶ್ರೀ ಜೋನ್ ಲೋಬೊ,ನಿವೃತ್ತ ಮುಖ್ಯೋಪಾಧ್ಯಾಯರು
ದಿ| ಮಥಾಯಸ್ ಲೋಬೊ ಮತ್ತು ದಿ| ಮೇರಿ ಲೋಬೊರವರ ಮಗನಾಗಿ 19-02-1947ರಲ್ಲಿ ಜನನ. ಒಂದರಿಂದ 8ನೇ ವರೆಗಿನ ಪ್ರಾಥಮಿಕ ಶಿಕ್ಷಣ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆ ಮೂಡಬೆಟ್ಟು ಶಂಕರಪುರದಲ್ಲಿ, ಪ್ರೌಢ ಶಿಕ್ಷಣ SVS ಪ್ರೌಢಶಾಲೆ ಇನ್ನಂಜೆಯಲ್ಲಿ, PUC ಮತ್ತುB.Sc ಪದವಿ ಶಿಕ್ಷಣ MGM Collage ಉಡುಪಿಯಲ್ಲಿ, ತದನಂತರ ಒಂದು ವರ್ಷ ಇನ್ನಂಜೆಯಲ್ಲಿ ಸಹಾಯಕ ಶಿಕ್ಷಕನಾಗಿ ಸೇವೆ. ಮರು ವರ್ಷ TMA PAI Collage of Education ನಲ್ಲಿ B.Ed ತರಬೇತಿ ಪಡೆದು ಪುನಃ ಇನ್ನಂಜೆಯಲ್ಲಿ 18 ವರ್ಷಗಳ ಕಾಲ ಸಹಾಯಕ ಶಿಕ್ಷನಾಗಿ ಸೇವೆ. 24-06-1969ರಲ್ಲಿ ಶಂಕರಪುರದಲ್ಲಿ ಸ್ಥಾಪನೆಗೊಂಡು ಆರು ವರ್ಷ ಪೂರೈಸಿದ ಸೈಂಟ್ ಜೋನ್ಸ್ ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯನಾಗಿ ಪದೋನ್ನತಿ ಪಡೆದು, ಮಂಗಳೂರಿನ ಕಥೋಲಿಕ್ ಶಿಕ್ಷಣ ಮಂಡಳಿಗೆ ಸೇರ್ಪಡೆ. ಅಂದಿನವರೆಗೆ ಮುಖ್ಯೋಪಾಧ್ಯಾಯರಾಗಿ ನನ್ನ ಗುರುಗಳಾಗಿದ್ದ ಇನ್ನಂಜೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ವಿಠಲ ಶೆಣೈರವರು ಸೇವೆ ಸಲ್ಲಿಸಿದ್ದರು. ಆ ಸಮಯದಲ್ಲಿ ಶಾಲಾ ಸ್ಥಾಪಕ ಸಂಚಾಲಕರಾಗಿ, ದಿ| ವಂದನೀಯ ಧರ್ಮಗುರು ಜಿ.ಬಿ. ಡಿಸೋಜರವರ ಸಮರ್ಥ ಮಾರ್ಗದರ್ಶನದಲ್ಲಿ, ನಂತರ ದಿ| ವಂದನೀಯ ಫಾ| ಜೆ.ಪಿ. ತಾವ್ರೊ, ತದನಂತರ ವಂದನೀಯ ಫಾ| ವಿನ್ಸೆಂಟ್ ಮೊಂತೇರೊ ನಂತರ ದಿ| ವಂದನೀಯ ಫಾ| ಅಲೆಗ್ಸಾಂಡರ್ ಲೋಬೊ ರವರ ಸಂಚಾಲಕತ್ವದಲ್ಲಿ ಒಟ್ಟು 17 ವರ್ಷ, 8 ತಿಂಗಳ ಸೇವೆಯನ್ನು ಸಲ್ಲಿಸಿ 58ನೇ ವರ್ಷದಲ್ಲಿ ಸೇವಾ ನಿವೃತ್ತಿ.
ಹೀಗೆ ಒಟ್ಟು 36 ವರ್ಷ 8 ತಿಂಗಳ ಸೇವಾ ಅವಧಿ. ನನ್ನ ಸೇವಾ ಅವಧಿಯಲ್ಲಿ ನನಗೆ ಪೂರ್ಣ ಸಹಕಾರ ನೀಡಿದ ಶಿಕ್ಷಕರು ಶ್ರೀಮತಿ ಕ್ಲಾರಾ .ಡಬ್ಲ್ಯೂ. ಮೆಂಡೋನ್ಸಾ, ಶ್ರೀಮತಿ ಹೆಲೆನ್ ಆಲಿಸ್ ಆಲ್ವ, ಶ್ರೀ ಸ್ಟ್ಯಾನ್ಲಿ ದಿನಮಣಿ, ಶ್ರೀ ಫ್ರಾನ್ಸಿಸ್ ಮಸ್ಕರೇನಸ್, ಶ್ರೀ ಮೋಹನ್‍ದಾಸ್ ಆರ್ ಶೆಟ್ಟಿ, ಶ್ರೀಮತಿ ಬೆನೆಡಿಕ್ಟಾ ಡಿಸೋಜ, ಶ್ರೀಮತಿ ಸೆವ್ರಿನ್ ಡಿಸೋಜ, ಶ್ರೀ ಶ್ರೀನಿವಾಸ್ ರಾವ್, ಶ್ರೀಮತಿ ಅಸುಂತಾ ವೀರಾ ಡಿಮೆಲ್ಲೊ, ಶ್ರೀ ಡೋಮಿಯನ್ ಆರ್ ನೊರೊನ್ನ, ಶ್ರೀ ರಾಘವೇಂದ್ರ ರಾವ್, ಶ್ರೀ ಅನಂತಕೃಷ್ಣ ಆಚಾರ್, ಶ್ರೀ ಚಂದ್ರಶೇಖರ್ ರಾವ್, ಶ್ರೀಮತಿ ಇನೆಟ್ ಡೇಸಾ ಹಾಗೂ ಶಿಕ್ಷಕೇತರ ಸಿಬ್ಬಂದಿಯಾಗಿ ದಿ| ಅಗಸ್ಟಿನ್ ಲೋಬೊ, ದಿ| ಅರ್ಥರ್ ರೊಡ್ರಿಗಸ್, ಶ್ರೀ ಐವನ್ ರೊಡ್ರಿಗಸ್ ಮತ್ತು ದಿವಂಗತ ಶ್ರೀ ವೆಂಕಟೇಶ್ ಭಂಡಾರ್ಕರ್‍ರವರು. ಸೇವಾವಧಿಯಲ್ಲಿ ಆದ ಮುಖ್ಯ ಕೆಲಸಗಳು ಪ್ರೌಢಸಾಲೆಯ ಮೇಲಿನ ಸಭಾಂಗಣ, ದಿ| ಆಲ್ಬರ್ಟ್ ಕಸ್ತಲಿನೋ ಸೈಕಲ್ ಸ್ಟ್ಯಾಂಡ್, ಲೈಬ್ರೆರಿಯ ವಿಸ್ತರಣೆ, ಆಟದ ಬಯಲಿನ ವಿಸ್ತರಣೆ ಹಾಗೂ ದಿವಂಗತ ಮಾರ್ಸೆಲ್ ಹಾಗೂ ದಿ| ಕೋಸೆಸ್ ಡಿಸೋಜ ಬಯಲು ರಂಗಮಂಟಪದ ನಿರ್ಮಾಣ. ಮಾತ್ರವಲ್ಲದೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸರಿಇಲ್ಲದ ಮಕ್ಕಳಿಗಾಗಿ ‘ಮಾನಸ’ ಶಾಲೆ, ಇಂಗ್ಲಿಷ್ ಅಕಾಡೆಮಿ ಶಾಲೆ, PU Collage ಸ್ಥಾಪನೆಯಲ್ಲಿ ಪ್ರಮುಖಪಾತ್ರ ವಹಿಸಲಾಗಿದೆ.
ಕೌಟುಂಬಿಕ ಜೀವನದಲ್ಲಿ 16-05-1975ರಲ್ಲಿ ಶ್ರೀಮತಿ ವೈಲೆಟ್ ಲೋಬೊರವರೊಡನೆ ವಿವಾಹ. ಅದರ ಫಲವಾಗಿ ಪೀಟರ್ ನವೀನ್ ಲೋಬೊ, ಡಾ| ನಿತಿನ್ ಪ್ರಕಾಶ್ ಲೋಬೊ ಮತ್ತು ನಯನ ಲೆತೀಸಿಯಾ ಲೋಬೊ ಮಕ್ಕಳ ಜನನ.
ಶೈಕ್ಷಣಿಕ ಸೇವೆ ಹೊರತುಪಡಿಸಿ, ಇಗರ್ಜಿಯ ಆಡಳಿತ ಮಂಡಳಿಯಲ್ಲಿ ಸುಮಾರು 42 ವರ್ಷಗಳಷ್ಟು ಇದ್ದು, ಪಾಲನಾ ಮಂಡಳಿಯಲ್ಲಿ 2 ಅವಧಿ ಉಪಾಧ್ಯಕ್ಷ ಹಾಗೂ 2 ಅವಧಿ ಕಾರ್ಯದರ್ಶಿಯಾಗಿ ಸೇವೆ. ಹಾಗೇ ವಿನ್ಸೆಂಟ್ ಡಿಪೌಲ್ ಸಂಘದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಜಿಯಾಗಿ ಸುಮಾರು 48 ವರ್ಷಗಳ ಸೇವೆ. ಸಾಮಾಜಿಕ ಜೀವನದಲ್ಲಿ ರೋಟರಿ ಶಂಕರಪುರ ಸಂಘದಲ್ಲಿ ಸ್ಥಾಪಕ ಸದಸ್ಯನಾಗಿ 37 ವರ್ಷ, ನಾಗರಿಕ ಸಮಿತಿಯಲ್ಲಿ ಸ್ಥಾಪಕ ಸದಸ್ಯ, ಶಂಕರಪುರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಉಪಾಧ್ಯಕ್ಷನಾಗಿ, ಇಗರ್ಜಿಯ ಸರ್ವಧರ್ಮ ಸಮಿತಿಯ ಸದಸ್ಯ, ಸಂಚಾಲಕ ಹಾಗೂ ಖಜಾಂಜಿಯಾಗಿ ಸೇವೆ ಸಲ್ಲಿಸಲಾಗಿದೆ.
ಸೈಂಟ್ ಜೋನ್ಸ್ ಹಳೆವಿದ್ಯಾರ್ಥಿ ಸಂಘದ ಸ್ಥಾಪಕ ಸದಸ್ಯನಾಗಿದ್ದು, ಶಾಲಾ ಅಭಿವೃದ್ಧಿಯಲ್ಲಿ ಈ ಸಂಘದ ಮೂಲಕ ಹಲವಾರು ಕೆಲಸಕಾರ್ಯಗಳನ್ನು ನಡೆಸುವಂತೆ ಸಲಹೆಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಲಾಗಿದೆ.
ಶ್ರೀ ಜೋನ್ ಲೋಬೊನಿವೃತ್ತ ಮುಖ್ಯೋಪಾಧ್ಯಾಯರು ಸೇಂಟ್ ಜಾನ್ಸ್ ಪ್ರೌಢಶಾಲೆ - ಕನ್ನಡ ಮಾಧ್ಯಮ
-
ಅಜ್ಞಾನದ ಅಂದಕಾರ ಅಳಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿತೋರಿಸುವವರು
ಶಿಕ್ಷಕರೆಂದರೆ ಕೇವಲ ಪಾಠ ಭೊಧಿಸುವವರಲ್ಲ. ಅಜ್ಞಾನದ ಅಂದಕಾರ ಅಳಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿತೋರಿಸುವವರು. ಮಾರ್ಗದರ್ಶಕಾದ ಶಿಕ್ಷಕರು ಪಠ್ಯದ ಜೊತೆಗೆ ಸಾಮಾಜಿಕ ಮೌಲ್ಯಗಳು. ಮತ್ತು ಅಚಾರ ವಿಚಾರಗಳನ್ನು ಬೋದಿಸುವವರಿಗಿ ( ಶಿಕ್ಷಕರಿಗೆ) ವಿಶಿಷ್ಟ ಸ್ಥಾನವಿದೆ. ಕಲ್ಲನ್ನು ಕೆತ್ತಿ ಶಿಲ್ಪಿ ಅದ್ಭುತ ಶಿಲ್ಪವಾನ್ನಾಗಿ ಪರಿವರ್ತಿಸುವಂತೆ. ಗುರುಗಳು ತನ್ನ ವಿದ್ಯಾರ್ಥಿಯ ಭವಿಷ್ಯವನ್ನು ಸಜ್ಜುಗೊಳಿಸಿ ಸುಂದರಮುಾರ್ತಿಯಾಗಿ ಸಮಾಜದ ದೇವಲಯಕ್ಕೆ ಅರ್ಪಿಸುವವರು.
ಟೀಚರ್ ತೆರೇಸಾ ಕ್ವಾಡ್ರಾಸ್ ಅವರು ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಮತ್ತು ಮುಖ್ಯೋಪಾಧ್ಯಾಯಿನಿಯಾಗಿ ತಮ್ಮ ಜೀವನದ ಅಮೂಲ್ಯ ಸಮಯವನ್ನು ಪೂರೈಸಿದ್ದಾರೆ, ಅವರು ಆರಂಭದಲ್ಲಿ ಶಂಕರಪುರೆಯಲ್ಲಿದ್ದ ಲಿಟಲ್ ಫ್ಲವರ್ ಶಾಲೆಯಲ್ಲಿ ಕಲಿಸುತ್ತಿದ್ದರು, ಆ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ವಿಭಿನ್ನ ಶಾಲೆಗಳನ್ನು ಹೊಂದಿದ್ದರು. ಸ್ವಲ್ಪ ಸಮಯದ ನಂತರ ಇದು ಸಂಯೋಜಿತ ಶಾಲೆ, ಸೇಂಟ್ ಜಾನ್ಸ್ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಾಯಿತು. ತೆರೇಸಾ ಕ್ವಾಡ್ರಸ್ ಶಿಕ್ಷಕಿ ನಮ್ಮ ಶಾಲೆಯಲ್ಲಿ (ಸೇಂಟ್ ಜಾನ್ಸ್ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ) ಶಿಕ್ಷಕಿಯಾಗಿ 36 ವರ್ಷ ಸೇವೆ ಸಲ್ಲಿಸಿದ್ದಾರೆ.
ಶ್ರಿಮತಿ ತೆರೆಜಾ ಕ್ವಾಡ್ರಸ್ನಿವೃತ್ತ ಮುಖ್ಯೋಪಾಧ್ಯಾಯಿನಿಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆ - ಕನ್ನಡ ಮಾಧ್ಯಮ
-
ಕ್ಲಾರಾ .ವಿ. ಮೆಂಡೋನ್ಸ,ನಿವೃತ್ತ ಮುಖ್ಯೋಪಾಧ್ಯಾಯಿನಿ
ನನ್ನ ಶಿಕ್ಷಣದ ಬುನಾದಿ ಆದದ್ದೆ ಸೈಂಟ್ ಜೋನ್ಸ್ ಚರ್ಚಿನ ವಿದ್ಯಾಸಂಸ್ಥೆಗಳಲ್ಲಿ. ೧೯೬೧ನೇ ಇಸವಿಯಲ್ಲಿ ನಮ್ಮ ಚರ್ಚಿನ ಆಡಳಿತಕ್ಕೆ ಒಳಪಟ್ಟ ಲಿಟ್ಲ್ ಫ್ಲವರ್ ಹೆಣ್ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ಒಂದನೇ ತರಗತಿಗೆ ಪ್ರವೇಶ ಪಡೆದೆ. ಆ ಕಾಲದಲ್ಲಿ ೫ನೇ ವರ್ಷ ಪೂರ್ಣ ಮಾಡಿದವರಿಗೆ ಒಂದನೇ ತರಗತಿಗೆ ಸೇರಿವ ಅವಕಾಶವಿತ್ತು. ಈ ಶಾಲೆಯಲ್ಲಿ ೫ ವರ್ಷ ೫ ಶಿಕ್ಷಕಿಯರ ಮಾರ್ಗದರ್ಶನದಲ್ಲಿ ನನ್ನ ಶಿಕ್ಷಣ ಮುಂದುವರಿಯಿತು. ದಿವಂಗತ. ಜಿಲ್ಲಿ ಟೀಚರ್, ದಿವಂಗತ. ಲೆತ್ತಿ ಟೀಚರ್, ದಿವಂಗತ. ಸೆರ್ಫಿನ್ ಟೀಚರ್, ಕುಮಾರಿ ತೆರೆಜ ಕ್ವಾಡ್ರಸ್ ಹಾಗೂ ದಿವಂಗತ. ಎಸ್ತು ಟೀಚರ್. ದೇವರ ಪಾದ ಸೇರಿದ ನಾಲ್ವರು ಶಿಕ್ಷಕಿಯರಿಗೆ ನನ್ನ ಕೃತಜ್ಞತೆಗಳ ಜೊತೆಗೆ, ಅವರ ಆತ್ಮಕ್ಕೆ ಚಿರಶಾಂತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಕುಮಾರಿ ತೆರೆಜ ಕ್ವಾಡ್ರಸ್ ತಮ್ಮ ನಿವೃತ್ತಿ ಜೀವನವನ್ನು ನಡೆಸುತ್ತಾರೆ. ೨೦೨೨ರಲ್ಲಿ ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿಯಾಗಿ ಅವರ ಮನೆಗೆ ಹೋಗಿ ಅವರನ್ನು ಸನ್ಮಾನಿಸಿವ ಕಾರ್ಯಕ್ರಮದಲ್ಲಿ ಬಾಗಿಯಾಗಲು ಅವಕಾಶ ಸಿಕ್ಕಿದುದು ನನ್ನ ಪುಣ್ಯವೆಂದು ತಿಳಿಯುತ್ತೇನೆ.
ಲಿಟ್ಲ್ ಫ್ಲವರ್ ಹುಡುಗಿಯರ ಶಾಲೆಯಲ್ಲಿ ೫ನೇ ತರಗತಿ ಮುಗಿಸಿದ ನಂತರ ನನ್ನ ೬ನೇ ತರಗತಿ ಶಿಕ್ಷಣ, ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ದಿವಂಗತ ಮೌರಿಸ್ ಡೇಸಾರವರು ಶಾಲಾ ಮುಖ್ಯಸ್ಥರಾಗಿ ಈ ಸಂಸ್ಥೆಯನ್ನು ನಡೆಸುತ್ತಿದ್ದರು. ದಿವಂಗತ ರತ್ನಕರ ಶೆಟ್ಟಿ, ದಿವಂಗತ ಶಾನುಭಾಗ್ ಸರ್, ದಿವಂಗತ ಮೇರಿ ಟೀಚರ್, ದಿವಂಗತ ಸಿರಿಲ್ ಡೇಸಾ ಹಾಗೂ ದಿವಂಗತ ಗ್ರೆಗರಿ ಡೇಸಾರವರು ನನಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶ್ರಮಿಸಿದರು. ಇಂದು ಅವರೆಲ್ಲರೂ ದೇವರ ಸನ್ನಿಧಿಯಲ್ಲಿ ನಮಗಾಗಿ ಪ್ರಾರ್ಥಿಸುತ್ತಾರೆ ಎಂದು ನಂಬಿದ್ದೇನೆ. ದೇವರು ಅವರಿಗೆ ಚಿರಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
೭ನೇ ತರಗತಿ ಪಾಸಾದ ಮೇಲೆ ಮುಂದಿನ ಶಿಕ್ಷಣ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಪೂರೈಸಿದ ನಂತರ ೧೯೭೮ರಲ್ಲಿ ನಾನು ಟಿ.ಎಮ್.ಎ.ಪೈ ಶಿಕ್ಷಣ ಮಹಾವಿದ್ಯಾನಿಲಯ ಮಣಿಪಾಲದಲ್ಲಿ B.Ed ತರಬೇತಿಗಾಗಿ ಸೇರ್ಪಡೆಗೊಂಡು ೧೯೭೯ರಲ್ಲಿ ನನ್ನ ತರಬೇತಿಯನ್ನು ಮುಗಿಸಿದೆ. ಆ ಸಮಯದಲ್ಲಿ ನಮ್ಮ ಚರ್ಚಿನ ಧರ್ಮಗುರುಗಳಾಗಿದ್ದವರು ದಿವಂಗತ ವಂದನೀಯ ಜಿ.ಬಿ. ಡಿಸೋಜರವರು. ಒಂದು ದಿನ ನನ್ನ ಹತ್ತಿರ ಮಾತನಾಡುವಾಗ ಹೇಳಿದರು ನಾವು ಇಲ್ಲಿ ಪ್ರೌಢಶಾಲೆಯನ್ನು ಪ್ರಾರಂಭ ಮಾಡುತ್ತೇವೆ. ನೀನು ಈ ಶಾಲೆಯಲ್ಲಿಯೇ ಕಲಿಸು. ಆಯಿತು ಫಾದರ್ ಎಂದು ಹೇಳಿದೆ. ಆದರೂ ವಿವಿಧ ಶಾಲೆಗಳಲ್ಲಿ ಕೆಲಸಕ್ಕಾಗಿ ಅರ್ಜಿಯನ್ನು ಹಾಕುತ್ತಾ ಇದ್ದೆ. ಆ ಕಾಲದಲ್ಲಿ ಹೆಚ್ಚು ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ಫಾದರ್ ಜಿ.ಬಿ. ಡಿಸೋಜರವರು ನಮ್ಮ ಚರ್ಚ್ ಪರಿಸರದಲ್ಲಿ ಪ್ರೌಢಶಾಲೆಯ ಸ್ಥಾಪನೆಗೆ ಬೇಕಾದ ವ್ಯವಸ್ಥೆಯನ್ನು ಮಾಡಲು ಪ್ರಾರಂಭಿಸಿದರು. ಅವರ ಜೊತೆ, ಜೊತೆಯಾಗಿ ದುಡಿದವರು ಶ್ರೀ ಆಂಟನಿ ಡೇಸಾ, ಶ್ರೀ ಬೆನೆಡಿಕ್ಟ್ ಮಾರ್ಟಿಸ್, ದಿವಂಗತ ಸಿರಿಲ್ ಡಾಯಸ್, ಶ್ರೀ ಜೋನ್ ಲೋಬೊ ಹಾಗೂ ಶ್ರೀ ಎಚ್. ಆರ್. ಆಲ್ವ.
೧೯೮೧ ಎಪ್ರಿಲ್‌ನಲ್ಲಿ ಫಾದರ್ ಜಿ.ಬಿ. ಡಿಸೋಜರವರು ನನ್ನನ್ನು ಅವರ ಆಫೀಸಿಗೆ ಕರೆದು ಜೂನ್ ೧ ರಂದು ಶಾಲೆ ಪ್ರಾರಂಭ ಮಾಡುವುದು ಇನ್ನು ಯಾರಾದರೂ ಃ.ಇಜ ಮಾಡಿದವರು ಇದ್ದರೆ ಅವರನ್ನು ನನ್ನ ಹತ್ತಿರ ಕಳುಹಿಸು ಎಂಬ ಸಿಹಿಸುದ್ದಿಯನ್ನು ನೀಡಿದರು. ಶ್ರೀಮತಿ ಹೆಲೆನ್ ಆಲಿಸ್ ಆಲ್ವರವರು ನನ್ನ ಜೊತೆ ಃ.ಇಜ ತರಬೇತಿಯನ್ನು ಮುಗಿಸಿ ಕೆಲಸದ ಹುಡುಗಾಟದಲ್ಲಿದ್ದರು. ಫಾದರ್‌ರವರು ಶಾಲೆಗೆ ಅನುಮತಿ ಸಿಗುವ ಮೊದಲೇ ೭ನೇ ತರಗತಿಯ ವಿದ್ಯಾರ್ಥಿಗಳಿಗೆ ಟಿ.ಸಿ ನೀಡಬಾರದೆಂದು ಅಂದಿನ ಶಾಲೆಯ ಮುಖ್ಯಸ್ಥೆ ಕುಮಾರಿ ಮೇರಿ ಸೆಲಿನ್ ಡೇಸಾರವರಿಗೆ ಸೂಚನೆ ನೀಡಿದ್ದರು.
ಜೂನ್ ೧, ೧೯೮೧, ೭ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪ್ರೌಢಶಾಲೆಯ ವಿದ್ಯಾಭ್ಯಾಸಕ್ಕಾಗಿ ನಮ್ಮ ಚರ್ಚಿನ ಕಮ್ಯೂನಿಟಿ ಹಾಲ್‌ನಲ್ಲಿ ಸೇರಿದರು. ಈ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚು ಕುರ್ಚಿಗಳು ಇರಲಿಲ್ಲ. ನೆಲದ ಮೇಲೆ ಕುಳಿತುಕೊಂಡರು. ಪ್ರೌಢಶಾಲೆ ಸ್ಥಾಪನೆಗೆ ಅನುಮತಿ ಇರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಫಾದರ್ ಗ್ಯಾಬ್ರಿಯೆಲ್ ಡಿಸೋಜರವರು ಹಿಂಜರಿಯಲಿಲ್ಲ. ನಿತ್ಯ ಸಹಾಯಮಾತೆಯ ಅಚಲ ಭಕ್ತರಾಗಿದ್ದ ಅವರು ಜನರೊಡಗೂಡಿ ಸಾಮೂಹಿಕ ಪ್ರಾರ್ಥನೆ ಕೈಗೊಂಡರು.
೮ನೇ ತರಗತಿಯಲ್ಲಿ ಕುಳಿತುಕೊಂಡ ವಿದ್ಯಾರ್ಥಿಗಳ ಹೆತ್ತವರಿಗೆ ಸಂಶಯ ಶಾಲೆಗೆ ಅನುಮತಿ ಸಿಗುತ್ತದೋ? ಇಲ್ಲವೋ?. ಅನುಮತಿ ಸಿಗದಿದ್ದರೆ ಮಕ್ಕಳಿಗೆ ಬೇರೆ ಶಾಲೆಗಳಲ್ಲಿ ಸೀಟು ಸಿಗ್ತದಾ. ಈ ದ್ವಂದ್ವ ಪರಿಸ್ಥಿಯಲ್ಲಿ ಕೆಲ ವಿದ್ಯಾರ್ಥಿಗಳ ಹೆತ್ತವರು ಟಿ.ಸಿ ಪಡೆದು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿಯೇ ಬಿಟ್ಟರು.
ಕೊನೆಗೆ ಫಾದರ್ ಜಿ.ಬಿ. ಡಿಸೋಜರವರು ಕರ್ನಾಟಕ ಸರಕಾರದಲ್ಲಿ ಪ್ರಭಾವಿಗಳಾಗಿದ್ದ ಶ್ರೀ. ಎಂ. ವೀರಪ್ಪ ಮೊÊಲಿ ಅವರಿಂದ ಆಶ್ವಾಸನೆ ಪಡೆದು, ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು. ಈ ಕಾರ್ಯದಲ್ಲಿ ಮುಂದೆ ಪ್ರೌಢಶಾಲೆಯ ಗುಮಾಸ್ತರಾಗಿ ನೇಮಿಸಲ್ಪಟ್ಟ ದಿವಂಗತ ಅಗಸ್ಟಿನ್ ಲೋಬೊರವರ ದಣಿವರಿಯದ ದುಡಿತವನ್ನು ನಾನು ಸ್ಮರಿಸುತ್ತೇನೆ.
ಶಾಲೆ ಸ್ಥಾಪನೆಯ ನಂತರ ೩ ತಿಂಗಳು ವಿದ್ಯಾರ್ಥಿಗಳ ಪಾಠ ಕಮ್ಯುನಿಟಿ ಹಾಲ್‌ನಲ್ಲೆ ನಡೆಯಿತು. ಶಾಲೆಗೆ ಅನುಮತಿ ಸಿಕ್ಕಿದ ನಂತರ ನೂತನ ಪ್ರೌಢಶಾಲೆಯನ್ನು ಪ್ರಥಮ ಮುಖ್ಯೋಪಾಧ್ಯಾಯರಾಗಿ ಆರಂಭದ ೬ ವರ್ಷಗಳಲ್ಲಿ ಇನ್ನಂಜೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಪಿ. ವಿಠಲ್ ಶೆಣೈ ಅವರು ಭದ್ರ ಬುನಾದಿ ಹಾಕಿದರು. ಸಂಚಾಲಕರ ಮಾರ್ಗದರ್ಶನದಲ್ಲಿ ಕ್ಲಾಸುಗಳಿಗೆ ಬೆಂಚ್, ಡೆಸ್ಕ್ಗಳ ವ್ಯವಸ್ಥೆಯ ಬಳಿಕ ವಿದ್ಯಾರ್ಥಿಗಳು ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಎರಡು ಕ್ಲಾಸ್ ರೂಮ್‌ಗಳಿಗೆ ತೆರಳಿದರು. ಹೀಗೆ ಪ್ರಥಮ ವರ್ಷ ೮೫ ವಿದ್ಯಾರ್ಥಿಗಳೊಂದಿಗೆ ಎಂಟನೆಯಲ್ಲಿ ಎ, ಬಿ ತರಗತಿಗಳು ಪ್ರಾರಂಭವಾದವು. ಶಿರ್ವದ ಶ್ರೀಮತಿ ಫ್ಲಾವಿಯ ಪುಟಾರ್ಡೊ ಃ.Sಛಿ ಃ.ಇಜ ಅವರನ್ನು ಪೂರ್ಣಕಾಲಿಕ ಶಿಕ್ಷಕಿಯಾಗಿ, ನನ್ನನ್ನು ಹಾಗೂ ಶ್ರೀಮತಿ ಹೆಲೆನ್ ಆಲಿಸ್ ಆಲ್ವರವರನ್ನು ಖಿemಠಿoಡಿಚಿಡಿಥಿ ಶಿಕ್ಷಕಿಯಾಗಿ ನೇಮಿಸಲಾಯಿತು.
೧೯೮೧ ರಿಂದ ೧೯೮೮ ರವರೆಗೆ ಸ್ಥಾಪಕ ಸಂಚಾಲಕರಾಗಿದ್ದ ಪೂಜ್ಯ ಫಾ. ಜಿ.ಬಿ. ಡಿಸೋಜರವರು ಪ್ರೌಢಶಾಲೆಗೆ ಬೇಕಾಗಿರುವ ಎಲ್ಲಾ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿದರು. ಶಾಲೆ ಬೆಳೆದಂತೆ ಶಾಲೆಗೆ ಬೇಕಾದಂತಹ ಸಮರ್ಪಕ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದವನ್ನು ನೇಮಿಸಿದರು. ಅವರು ಈ ಚರ್ಚಿನಿಂದ ನಿವೃತ್ತಿ ಹೊಂದುವ ಸಮಯದಲ್ಲಿ ಎರಡನೇ ಅಂತಸ್ತಿನಲ್ಲಿ ಶಾಲೆಗೆ ಶಾಲೆಗೆ ಸಭಾಭವನವನ್ನು ನಿರ್ಮಿಸಿ ಅದಕ್ಕೆ ತಗಲಿದ ರೂ.೭೫,೦೦೦/- ತಾವೇ ನೀಡಿ ಪ್ರೌಢಶಾಲೆಯ ಅವಶ್ಯಕತೆಗಳನ್ನು ಪೂರೈಸಿದರು. ೧೯೮೮ ರಿಂಧ ೧೯೯೫ರವರೆಗೆ ರೆ. ಫಾ. ಜೆ.ಪಿ. ತಾವ್ರೊರವರು ಹಾಗೂ ೧೯೯೫ ರಿಂದ ೨೦೦೨ರವರೆಗೆ ವಂದನೀಯ ಫಾದರ್ ವಿನ್ಸೆಂಟ್ ಮೊಂತೆರೊರವರು ಸಂಚಾಲಕರಾಗಿ, ಪ್ರೌಢಶಾಲೆಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಸೌಲತ್ತುಗಳನ್ನು ಒದಗಿಸಿಕೊಟ್ಟರು.
೧೯೮೭ರಲ್ಲಿ ಈ ಶಾಲೆಯು ಸರಕಾರದ ಖಾಯಂ ಅನುದಾನಕ್ಕೆ ಒಳಪಟ್ಟಿತು. ಶಾಲೆಯು ಅನುಧಾನಕ್ಕೆ ಒಳಪಟ್ಟ ನಂತರ ಪೂರ್ಣ ಪ್ರಮಾಣದಲ್ಲಿ ಶಾಲೆಯನ್ನು ಮುನ್ನಡೆಸಲು ಇನ್ನಂಜೆ ಪ್ರೌಢಶಾಲೆಯಲ್ಲಿ ವಿಜ್ಞಾನ ಸಹಾಯಕರಾಗಿದ್ದ ಶ್ರೀ ಜೋನ್ ಲೋಬೊರವರನ್ನು ಹೊಸ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ೧೯೮೭ ಜೂನ್ ೨೪ ರಂದು ನೇಮಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾಗಿ ಎಲ್ಲಾ ಶಿಕ್ಷಕ-ಶಿಕ್ಷಕೇತರ ವರ್ಗದವರನ್ನು ಒಂದೇ ಕುಟುಂಬದAತೆ ಇರಿಸಿ ಯಾವುದೇ ಬಿರುಗಾಳಿಗೆ ಅದು ಸಿಲುಕದಂತೆ ಕಾಪಾಡಿ ೧೮ ವರ್ಷ ಸೇವೆ ಸಲ್ಲಿಸಿ ೨೦೦೫ ಫೆಬ್ರವರಿ ೨೮ರಂದು ನಿವೃತ್ತಿ ಹೊಂದಿದರು.
ಶ್ರೀ ಜೋನ್ ಲೋಬೊರವರ ನಂತರ ಇದೇ ಪ್ರೌಢಶಾಲೆಯಲ್ಲಿ ೨೫ ವರ್ಷ ಸೇವೆ ಸಲ್ಲಿಸಿದ ನಾನು ಮುಖ್ಯೋಪಾಧ್ಯಾಯಿನಿಯಾಗಿ ನೇಮಕಗೊಂಡೆನು. ಈ ಅವಧಿಯಲ್ಲಿ ನಮ್ಮ ಸಂಚಾಲಕರಾಗಿದ್ದವರು ದಿವಂಗತ ವಂದನೀಯ ಫಾದರ್ ಅಲೆಗ್ಸಾಂಡರ್ ಲೋಬೊರವರು. ಅವರ ಮಾರ್ಗದರ್ಶನದಲ್ಲಿ ಪ್ರೌಢಶಾಲೆಯ ಬೆಳ್ಳಿಹಬ್ಬವನ್ನು ಆಚರಣೆ ಮಾಡುವ ಭಾಗ್ಯ ನನಗೆ ಲಭಿಸಿತು.
೨೦೦೯ರಲ್ಲಿ ವಂದನೀಯ ಪೂಜ್ಯ ಡಾ| ಲೆಸ್ಲಿ ಡಿಸೋಜರವರು ಸಂಚಾಲಕರಾಗಿ ನಾನು ನಿವೃತ್ತಿ ಹೊಂದುವವರೆಗೆ ನನಗೆ ಮಾರ್ಗದರ್ಶನ ನೀಡಿ, ಶಾಲಾ ವ್ಯವಸ್ಥೆಯನ್ನು ಉತ್ತಮ ಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಂಡರು.
೧೦ ವರ್ಷಗಳ ಕಾಲ ಶಾಲಾ ಮುಖ್ಯಸ್ಥೆಯಾಗಿ ಹಾಗೂ ೨೫ ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಹೀಗೆ ಒಟ್ಟು ೩೫ ವರ್ಷಗಳ ಕಾಲ ಈ ಪ್ರೌಢಶಾಲೆಯಲ್ಲಿ ಸೇವೆ ನೀಡಲು ಅವಕಾಶ ಮಾಡಿಕೊಟ್ಟ ಭಗವಂತನಿಗೆ ನನ್ನ ನಮನಗಳು. ಈ ನಡುವಿನ ಕಾಲದಲ್ಲಿ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾ ಕಛೇರಿಯಲ್ಲಿ ಕಾರ್ಯವೆಸಗುವ ಎಲ್ಲರೂ ಒಂದೇ ಮನಸ್ಸಿನಿಂದ, ಒಟ್ಟಾಗಿ ದುಡಿದದ್ದು, ನಾವೆಲ್ಲರೂ ಒಂದೇ ಕುಟುಂಬದವರು ಯಾರಿಗೂ ನೋವಾಗಬಾರದು, ನೋವಿನಲ್ಲಿ ಒಬ್ಬರಿಗೊಬ್ಬರು ಸಾಂತ್ವನ ಹೇಳುವುದು. ಈ ಒಂದು ಉತ್ತಮ ವಾತಾವರಣದಲ್ಲಿ ನಾವು ಬೆಳೆಯಲು, ಮಕ್ಕಳನ್ನು ಸುಶಿಕ್ಷಿತವಾಗಿ ಮಾಡಲು ಸಾಧ್ಯವಾಯಿತು.
ನಮ್ಮ ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ಹಿರಿಯದು. ೧೯೮೩ರಲ್ಲಿ ನಮ್ಮ ಶಾಲಾಭಿಮಾನಿ ಶ್ರೀ ಎಚ್. ಆರ್. ಆಳ್ವರವರ ಮುತುವರ್ಜಿಯಿಂದ ಹಾಗೂ ದಿವಂಗತ ಮೌರಿಸ್ ಡೇಸಾ ಹಾಗೂ ದಿವಂಗತ ಶ್ರೀ ಪಿ. ವಿಠಲ್ ಶೆಣೈರವರ ಸಹಕಾರದಿಂದ ಪ್ರಾರಂಭವಾದ ಸಂಘವು ಇಂದು ಬೆಳೆದಿದೆ ಹಾಗೂ ನಮ್ಮ ಸೈಂಟ್ ಜೋನ್ಸ್ ಶಾಲೆಗಳ ಆಧಾರಸ್ತಂಭವಾಗಿ ನಿಂತಿದೆ.
ಪ್ರಾರAಭದ ವರ್ಷ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಪ್ರಾದ್ಯಾಪಕರಾಗಿದ್ದ ಶ್ರೀ ರತ್ನಾಕರ ಶೆಟ್ಟಿಯವರು ಪ್ರಥಮ ಅಧ್ಯಕ್ಷರಾಗಿ, ಶ್ರೀ ಎಚ್. ಆರ್. ಆಲ್ವರವರು ಕಾರ್ಯದರ್ಶಿಯಾಗಿ ಹಾಗೂ ನಾನು ಖಜಾಂಜಿಯಾಗಿ ಆಯ್ಕೆಯಾದೆವು. ನಂತರ ಶ್ರೀ ಎಚ್. ಆರ್. ಆಲ್ವರವರು ಸತತವಾಗಿ ೧೦ ವರ್ಷಗಳ ಅಧ್ಯಕ್ಷರಾಗಿ ಸೇವೆ ನೀಡಿದರು. ಪ್ರೌಢಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸತತವಾಗಿ ಪ್ರಯತ್ನಿಸಿದರು. ಹೊಸ ವಿದ್ಯಾಸಂಸ್ಥೆಗಳು ನಮ್ಮ ಶಾಲಾ ಆವರಣದಲ್ಲಿ ಪ್ರಾರಂಭವಾದವು. ಹಳೆವಿದ್ಯಾರ್ಥಿ ಸಂಘ, ಹಲವಾರು ಉತ್ಸಾಹಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪ್ರಯತ್ನದ ಫಲವಾಗಿ ಬಲಯುತವಾಗಿದೆ ಎಂದು ತಿಳಿಸಲು ಸಂತೋಷವೆನಿಸುತ್ತದೆ. ಈ ಪ್ರಸಕ್ತ ವರ್ಷದಲ್ಲಿ ಶಾಲಾ ಹಳೆವಿದ್ಯಾರ್ಥಿ ಶ್ರೀ ಫ್ರಾನ್ಸಿಸ್ ಪ್ರಕಾಶ್ ಡಿಸೋಜರವರು ಅಧ್ಯಕ್ಷರಾಗಿ, ಎಲ್ಲರನ್ನೂ ವೆಬ್‌ಸೈಟ್ ಮೂಲಕ ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಾ ಹಳೆ ವಿದ್ಯಾರ್ಥಿಗಳು, ಅವರ ಈ ಉತ್ತಮ ಸೇವೆಗೆ ಸಹಕಾರ ನೀಡಬೇಕಾಗಿ ವಿನಂತಿಸುತ್ತೇನೆ. ಎಲ್ಲಾ ನನ್ನ ಹಳೆ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸುತ್ತೇನೆ.
ಕ್ಲಾರಾ .ವಿ. ಮೆಂಡೋನ್ಸ ನಿವೃತ್ತ ಮುಖ್ಯೋಪಾಧ್ಯಾಯಿನಿಸೇಂಟ್ ಜಾನ್ಸ್ ಪ್ರೌಢಶಾಲೆ - ಕನ್ನಡ ಮಾಧ್ಯಮ
-
- Sweet Memories of my Beloved workplace
-
To quench
the education thirst of the Locals for an English medium school. Rev. Fr
Vincent Monterio very dynamic and genius priest of St. John the evangelist church
ventured to start St. Johns’s Academy on 1st of June 1998. With the
blessing of St. Jhon’s the evangelist and the support of parishioners. I Accepted
the Yoke of responsibility of newly started school as its first Principal. The need
of a new building was fulfilled with Rev. Fr. Vincent Monterio and later by
Rev. Fr. Alexandar Lobo. With the generous donation of parishioners in and out
of the country. Before Joining this New institution, I was working in Mukunda Kripa
English Medium school for 17 years. Where
the students Number was 800 to 900 from LKG to 8th. In the beginning
I found myself Fish out of the water with just 35 students. But as the Years Rolled on our Institution
grew up with Numbers and fame
Though the
school took its birth with few students. The educational caliber of the
students and the talented young and energetic teachers of our school could fall
in line with well-established schools in the district. Our teachers trained
every student to be the best student, Our students were bouquet of volleyball. They
competed with well established institutions and brought laurels to the institution
in every field. Such as educational and co-curricular activities. We have achieved 100% result in the board exam
for 5(five) consecutive years. 2010 to 2014. I am very much indebted to my
students and teaching staff. And cherish the sweet memories of my school and
ponder over them in my retired life.
The old
student association of St. John’s educational Institutions were a great support
us during our initial steps. We lacked In finance and student Numbers, during
those critical times the old student association held our hands with affection
allowed our student to exhibit their talents. The recognized intelligence of
our students and honored the distinction
holders every year during celebration. I
am Highly grateful to all the president and members of the association for the generous
love concern and support to St. Johns Academy may the association climb up to
the pinnacle of glory, and be an good example to others. Thank you.
IDA CARNELIOನಿವೃತ್ತ ಮುಖ್ಯೋಪಾಧ್ಯಾಯಿನಿ (First)St. John's Academy ( English Medium )
-
ಶ್ರೀಮತಿ ಎಜ್ಮಿ ಫೆರ್ನಾಂಡಿಸ್,ನಿವೃತ್ತ ಮುಖ್ಯೋಪಾಧ್ಯಾಯಿನಿ
ನಾನು 1986 ಜೂಲೈ ಒಂದರಂದು ಸಂತ ಜೂದರ ಹಿ. ಪ್ರಾ. ಶಾಲೆ ಪಕ್ಷಿಕೆರೆ ಇಲ್ಲಿಂದ ಸಂತ ಜೋನರ ಹಿ. ಪ್ರಾ. ಶಾಲೆಗೆ ವರ್ಗಾವಣೆಯಾಗಿ ಸೇವೆಗೆ ಸೇರಿದೆನು. ಅಂದು ದಿ|ಮೇರಿ ಸೆಲಿನ್ ಡೇಸಾರವರು ನನ್ನ ಮುಖ್ಯ ಶಿಕ್ಷಕಿ ಆಗಿದ್ದರು. ಆಗ ನಮ್ಮ ಶಾಲೆಯಲ್ಲಿ 650ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು ಮಾತ್ರವಲ್ಲದೆ ನಾವು ಸುಮಾರು 15 ಮಂದಿ ಶಿಕ್ಷಕರು ಇದ್ದೆವು. ಪ್ರತಿ ತರಗತಿಯಲ್ಲಿ ಎ, ಬಿ, ವಿಭಾಗಗಳಿದ್ದು 6ನೇ ತರಗತಿಯಲ್ಲಿ ಎ, ಬಿ, ಸಿ ವಿಭಾಗಗಳಿದ್ದವು.
ನಮ್ಮ ಶಾಲಾ ವಿಶೇಷತೆ ಎಂದರೆ ಕಲಿಯುವಿಕೆಯಲ್ಲಿ ಮಕ್ಕಳು ಎತ್ತಿದ ಕೈ ಮಾತ್ರವಲ್ಲದೇ ಇನಿತರ ಚಟುವಟಿಕೆಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾವಾನ್ವಿತಾರಾಗಿದ್ದರು. ಆ ಸಮಯದಲ್ಲಿ ಮಕ್ಕಳು ಮಲ್ಲಿಗೆ ಹೂವನ್ನು ತೆಗೆದು ಶಾಲೆಗೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದರು . ಮನೆ ತುಂಬಾ ಮಕ್ಕಳಿರುದರಿಂದ ಶಾಲೆಯಲ್ಲೂ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. ಶಿಕ್ಷಕರು ಮಕ್ಕಳೊಡನೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಕು|ಸೆಲಿನ್ ಡೇಸಾರ ನಂತರ ದಿ|ಶ್ರೀಯುತ ಸಿರಿಲ್ ಡಾಯಸ್ ರವರು ಈ ಶಾಲೆಯ ಚುಕ್ಕಾಣಿಯನ್ನು ಹಿಡಿದರು.
ಬಳಿಕ ಶ್ರೀಯುತ ರುಜಾರಿಯೊ ಡಿಸೋಜರವರು ಮುಖ್ಯ ಶಿಕ್ಷಕರಾಗಿದ್ದರು. ಅವರು ನಿವೃತ್ತಿಯಾದ ಬಳಿಕ 2007 ಜುಲೈ 1 ರಿಂದ ನಾನು ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆಗೆ ಸೇರಿದೆನು. ಆಗ ನಮ್ಮ ವಠಾರದಲ್ಲಿಯೇ ಆಂಗ್ಲ ಮಾಧ್ಯಮ ಶಾಲೆ ಸ್ಥಾಪನೆಯಾದ ಬಳಿಕ ಕನ್ನಡ ಮಾಧ್ಯಮಕ್ಕೆ ಬರುವ ಸಂಖ್ಯೆ ಕಡಿಮೆ ಆದ ಕಾರಣ ಶಿಕ್ಷಕರ ಸಂಖ್ಯೆಯು ಕಡಿಮೆಯಾಯಿತು. ಮುಖ್ಯ ಶಿಕ್ಷಕಿ ಎಂದರೆ ತುಂಬಾ ಜವಾಬ್ದಾರಿಯುತ ಕೆಲಸ. ಇಲ್ಲಿನ ಎಲ್ಲಾ ಸಂಚಾಲಕರ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳ ನೆರವಿನಿಂದ ನನಗೆ ದಿನಗಳು ಕಳೆದದ್ಧೇ ಗೊತ್ತಾಗಲಿಲ್ಲ.
ನಾವು ನೋಡುತ್ತೇವೆ ಅದೆಷ್ಟೋ ನಮ್ಮ ನೆರೆಯ ಶಾಲೆಗಳು ಮುಚ್ಚಿಕೊಂಡವು. ಆದರೆ ಸಂತ ಜೋನ ಎವಾಂಜಿಲಿಸ್ತರ ಕೃಪೆಯಿಂದ ನಮ್ಮ ಶಾಲೆಯಲ್ಲಿ ಮಕ್ಕಳ ಕೊರತೆ ಇಲ್ಲ. ಪ್ರಸ್ತುತ ಶ್ರೀಮತಿ ಐರಿನ್ ಡಿಸೋಜರವರು ನಮ್ಮ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿಯಾಗಿರುತ್ತಾರೆ.ಹಾಗೆಯೇ ಇಬ್ಬರು ಶಿಕ್ಷಕರಿದ್ದು ಉಳಿದ ಮೂವರು ಗೌರವಾನ್ವಿತ ಶಿಕ್ಷಕರು ಸೇವೆ ಸಲ್ಲಿಸುತ್ತಾರೆ. ನನ್ನ ಸೇವಾಧಿಯಲ್ಲಿ ನನಗೆ ಉತ್ತಮ ಮಾರ್ಗದರ್ಶನ ವಿತ್ತ ಎಲ್ಲಾ ಸಂಚಾಲಕರ ಉಪಕಾರ ಸ್ಮರಿಸುತ್ತ , ಹಾಗೂ ನನಗೆ ನೆರವಿತ್ತ ಎಲ್ಲಾ ನನ್ನ ಸಹದ್ಯೋಗಿ ಬಂಧುಗಳ ಉಪಕಾರ ಸ್ಮರಿಸುತ್ತಾ ನನ್ನ ಶಾಲೆಯ ಅನುಭವಕ್ಕೆ ವಿರಾಮ ನೀಡುತ್ತೇನೆ.ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬುವುದಕ್ಕೆ ನಮ್ಮ ಶಾಲೆಯ ಹಳೇವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ ಅವರು ಎಲ್ಲ ವಿಧದಲ್ಲಿ ತಾವು ಕಲಿತ ಶಾಲೆಗೆ ತಮ್ಮ ಕೈಲಾದ ಮಟ್ಟಿಗೆ ಸಹಾಯಾಹಸ್ತವನ್ನು ನೀಡುತ್ತಿದ್ದಾರೆ. ಈ ಶಾಲೆಯಲ್ಲಿ ಕಲಿತ ಅದೆಷ್ಟೋ ಮಕ್ಕಳು ಸಮಾಜದಲ್ಲಿ ನಕ್ಷತ್ರಗಳಂತೆ ಮಿಂಚುತ್ತಿದ್ದಾರೆ.
ಧನ್ಯವಾದಗಳು....
ಶ್ರೀಮತಿ ಎಜ್ಮಿ ಫೆರ್ನಾಂಡಿಸ್ನಿವೃತ್ತ ಮುಖ್ಯೋಪಾಧ್ಯಾಯಿನಿ ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆ - ಕನ್ನಡ ಮಾಧ್ಯಮ
-
psum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus.
ಶ್ರೀ ಮೋಹಾಂದಾಸ್ ಶೆಟ್ಟಿನಿವೃತ್ತ ಮುಖ್ಯೋಪಾಧ್ಯಾಯರು ಸೇಂಟ್ ಜಾನ್ಸ್ ಪ್ರೌಢಶಾಲೆ - ಕನ್ನಡ ಮಾಧ್ಯಮ
-
psum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus.
ದಿ| ಶ್ರೀ ರುಜಾರಿಯೊ ಡಿಸೋಜಾನಿವೃತ್ತ ಮುಖ್ಯೋಪಾಧ್ಯಾಯರುಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆ - ಕನ್ನಡ ಮಾಧ್ಯಮ ಪ್ರಾಥಮಿಕ
-
ipsum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus.
ದಿ.ಕು| ಮೆರಿ ಸೆಲಿನ್ ಡೆಸಾನಿವೃತ್ತ ಮುಖ್ಯೋಪಾಧ್ಯಾಯಿನಿಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆ - ಕನ್ನಡ ಮಾಧ್ಯಮ
-
psum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus.
ದಿ ಶೀ। ಮೌರಿಸ್ ಡೇಸನಿವೃತ್ತ ಮುಖ್ಯೋಪಾಧ್ಯಾಯರು ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆ - ಕನ್ನಡ ಮಾಧ್ಯಮ
-
psum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus
Rev. Fr Vincent CoelhoPrincipalPUC - St. Johns Shankarapura
-
psum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus
Rev. Fr. Vishal LoboPrincipal PUC - St. Johns Shankarapura
-
psum dolor sit amet, consectetur adipiscing elit. Fusce congue metus vitae augue vehicula lacinia. Phasellus lacinia diam justo, at pretium neque fringilla at. Integer fermentum odio sed elit tincidunt imperdiet. Ut varius, nibh vitae pharetra pellentesque, lacus ex gravida nisl, vel rhoncus ligula sapien ac sapien. Morbi scelerisque interdum tortor ac mattis. In ut purus diam. Nulla eu libero at sapien bibendum venenatis quis nec urna. Vivamus vestibulum dapibus massa sed sagittis. Suspendisse fringilla massa ut ante egestas facilisis. Donec dictum blandit urna ut scelerisque. Donec volutpat dictum nibh at pharetra. Sed eu leo eget mi pharetra elementum vel sit amet sem. Integer commodo vel sapien vitae tempor. Phasellus eget lacus velit. Donec semper tortor ut faucibus maximus.
ದಿ| ಶ್ರೀ ಸಿರಿಲ್ ಡಾಯಸ್ನಿವೃತ್ತ ಮುಖ್ಯೋಪಾಧ್ಯಾಯರು ಸೇಂಟ್ ಜಾನ್ಸ್ ಪ್ರಾಥಮಿಕ ಶಾಲೆ - ಕನ್ನಡ ಮಾಧ್ಯಮ