Past President Column

  • Herald  Reginald Alva (ಎಚ್. ಆರ್. ಆಳ್ವ )

     ಅಧ್ಯಕ್ಷ (1985 ಜನವರಿಯಿಂದ 1994 ದಶಂಬರ - 10 ವರ್ಷ)

    ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘ, ಶಂಕರಪುರ 


    ಶಂಕರಪುರ ಸೈಂಟ್ ಜೋನ್ ಸುವಾರ್ತೆದಾರರ ಇಗರ್ಜಿಯ ಆಡಳಿತಕ್ಕೊಳಪಟ್ಟ ಸೈಂಟ್ ಜೋನ್ಸ್ ಪ್ರಾಥಮಿಕ ಶಾಲೆ 1902ರಲ್ಲಿ ಸ್ಥಾಪನೆಯಾಗಿತ್ತು. ವಂದನೀಯ ಗುರು (ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್) ಬೇಸಿಲ್ ಸಾಲ್ವದೊರ್ ಪೆರಿಸ್ ಅವರು ಮುಖ್ಯೋಪಾಧ್ಯಾಯರಾಗಿದ್ದ ಕಾಲದಲ್ಲಿ 1946ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ರೂಪುಗೊಂಡಿತ್ತು.
    1981ರಲ್ಲಿ ವಂ. ಗುರು ಗೇಬ್ರಿಯಲ್ ಬಿ. ಡಿಸೋಜ ಅವರ ನೇತೃತ್ವದಲ್ಲಿ ಪ್ರೌಢ ಶಾಲೆ ಆರಂಭವಾದಾಗ  ಮುಂಚೂಣಿಯಲ್ಲಿದ್ದ ನಾಲ್ಕೈದು ಮಂದಿಯಲ್ಲಿ ನಾನೂ ಒಬ್ಬನಾಗಿದ್ದೆ ಎನ್ನುವುದಕ್ಕೆ ಸಂತೋಷವೆನಿಸುತ್ತದೆ. ಆಗ ನನ್ನ ಹರೆಯ 21 ವರ್ಷಗಳು. 16ರ ಹರೆಯದಿಂದಲೇ ಪಾಂಗ್ಳಾ ಇಗರ್ಜಿಯ ಸಿವೈಎಂ ಸದಸ್ಯನಾಗಿದ್ದು ಬಳಿಕ 19ರ ಹರೆಯದಲ್ಲಿ ಅವಿಭಜಿತ ದ.ಕ. ಮತ್ತು ಕಾಸರಗೋಡು ತಾಲೂಕನ್ನೊಳಗೊಂಡ ಮಂಗಳೂರು ಡಯೋಸಿಸ್ ಸಿವೈಎಂನಲ್ಲಿ ಬುಲೆಟಿನ್ ಸಂಪಾದಕ, ಪ್ರಧಾನ ಕಾರ್ಯದರ್ಶಿ ಮತ್ತು ಸತತ ಮೂರು ಅವಧಿಗಳಿಗೆ ಅಧ್ಯಕ್ಷನಾಗಿದ್ದೆ. ಆ ಸಂದರ್ಭದಲ್ಲಿ ಬಹಳಷ್ಟು ಜನರ ಪರಿಚಯ ವಾಗಿತ್ತು. ಅದರಲ್ಲಿ ಊರ ಜನರು, ಶಂಕರಪುರ ಶಾಲೆಗಳ ಹಳೆ ವಿದ್ಯಾರ್ಥಿಗಳೂ ಇದ್ದರು.
    ನಮ್ಮ ಶಾಲೆಯ ಹಳೆವಿದ್ಯಾರ್ಥಿಗಳನ್ನು ಒಗ್ಗೂಡಿಸಬೇಕೆಂಬ ಉತ್ಕಟವಾದ ಆಶೆಯಿತ್ತು. ಆದರೆ, ಪಣಂಬೂರಿನ ಪ್ರತಿಷ್ಟಿತ  ಎಂಸಿಎಫ್ ರಸಗೊಬ್ಬರ ಕಾರ್ಖಾನೆಯಲ್ಲಿ ನನ್ನ ದುಡಿತ, ಮಂಗಳೂರು, ಶಂಕರಪುರ, ಪಾಂಗಾಳದಲ್ಲಿ ವಿವಿಧ ಚಟುವಟಿಕೆಗಳಿಂದ ಸಾಧ್ಯವಾಗಿರಲಿಲ್ಲ. ಯಾವುದಕ್ಕೂ ಕಾಲ ಕೂಡಿ ಬರಬೇಕಲ್ಲ? 
     ವಂ.ಗುರು ಗೇಬ್ರಿಯಲ್, ಶಂಕರಪುರದಲ್ಲಿ ನನ್ನ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಮಾವ್ರಿಸ್ ಡೇಸ, ಇನ್ನಂಜೆಯಲ್ಲಿ ನನ್ನ ಮುಖ್ಯೋಪಾಧ್ಯಾಯರು ಹಾಗೂ ಶಂಕರಪುರ ನೂತನ  ಪ್ರೌಢ ಶಾಲೆಯ  ಪ್ರಥಮ ಮುಖ್ಯೋಪಾಧ್ಯಾಯರೂ ಆಗಿದ್ದ ಶ್ರೀ ಪಿ. ವಿಠ್ಠಲ ಶೆಣೈ, ಇನ್ನಂಜೆಯಲ್ಲಿ ನನ್ನ ನೆಚ್ಚಿನ ಅಧ್ಯಾಪಕರಾಗಿದ್ದ ಶ್ರೀ ಜೋನ್ ಲೋಬೊ (ಬಳಿಕ ಇವರು ಶಂಕರಪುರದಲ್ಲಿ ಮುಖ್ಯೋಪಾಧ್ಯಾಯರಾದರು), ನನ್ನ ಆಗಿನ ಹಿರಿಯ-ಕಿರಿಯ ಮಿತ್ರರಲ್ಲಿ  ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆ ಬಗೆಗಿನ ಸಮಾಲೋಚನೆ ಜಾರಿಯಲ್ಲೇ ಇತ್ತು.
     ಶಂಕರಪುರ ನೂತನ ಪ್ರೌಢ ಶಾಲೆಯ ಆರಂಭದಲ್ಲಿ ಸೇರ್ಪಡೆಗೊಂಡ ಅಧ್ಯಾಪಕ ವೃಂದ ಬಹಳಷ್ಟು ಉತ್ಸಾಹಿಗಳಾಗಿದ್ದು  ಇಂದಿಗೂ ನೆನೆಯಲ್ಪಡುತ್ತಾರೆ. ಇವರ ಉತ್ಸಾಹ ನನ್ನ ಯೋಚನೆಗೂ ಗರಿ ಮೂಡಿಸಿತು.
     ಗುರುಹಿರಿಯರಲ್ಲಿ, ಆಸಕ್ತ ಹಳೆ ವಿದ್ಯಾರ್ಥಿಗಳಲ್ಲಿ ಸಮಾಲೋಚಿಸಿ ಸಂಘದ ಸ್ಥಾಪನೆಗೆ ಮುಂದಡಿಯಿಡಲಾಯಿತು. ಅದೇ ಸಮಯ ಪ್ರೌಢ ಶಾಲೆಯ ಪ್ರಥಮ ಬ್ಯಾಚ್ ಹೊರಬಂದಿತ್ತು. ಅವರೂ ಶಾಲೆಯ ಹಳೆವಿದ್ಯಾರ್ಥಿಗಳಾಗಿದ್ದರು.
    ಆ ಹೊತ್ತಿಗೆ ನಾನು ಆಗಲೇ ಇದ್ದ ಕಾರ್ಯಚಟುವಟಿಕೆಗಳ ಜೊತೆಗೆ "ಆಮ್ಚೊ ಯುವಕ್" ಎನ್ನುವ ಕೊಂಕಣಿ ಮಾಸಿಕವನ್ನು ಆರಂಭಿಸಿ ಸಂಪಾದಿಸುತ್ತಿದ್ದೆ. ನೂತನ ಹಳೆ ವಿದ್ಯಾರ್ಥಿ ಸಂಘಕ್ಕೆ ಶಂಕರಪುರದಲ್ಲಿ ನನ್ನ ಅಧ್ಯಾಪಕರಾಗಿದ್ದ ಶ್ರೀ ರತ್ನಕರ ಶೆಟ್ಟಿ ಅವರನ್ನು ಅಧ್ಯಕ್ಷರಾಗಿ, ಶ್ರೀ ಹೆನ್ರಿ ಮತಾಯಸ್ ಅವರನ್ನು ಕಾರ್ಯದರ್ಶಿಯಾಗಿ ಆರಿಸಲಾಯಿತು. 
    ಸಂಘವನ್ನು ಬಲಪಡಿಸಲು ಅಧ್ಯಕ್ಷ ಸ್ಥಾನ  ವಹಿಸಿಕೊಳ್ಳಬೇಕೆಂಬ ಒತ್ತಡವಿತ್ತು.   ಜತೆಗೆ ನನ್ನಲ್ಲಿ ಹುಮ್ಮಸ್ಸೂ ಇತ್ತು.  ಆ ಕಾರಣ ಅಧ್ಯಕ್ಷತೆ ವಹಿಸಿ ಹತ್ತು  ವರ್ಷಗಳ ಕಾಲ ಮುನ್ನಡಿಸಿದೆ. ನನ್ನ ಅವಧಿಯಲ್ಲಿ ಸಹಕರಿಸಿದ ಈ ಮೇಲೆ ಉಲ್ಲೇಖಿಸಲ್ಪಟ್ಟವರಲ್ಲದೆ ವಂದನೀಯ ಗುರು ಜೆ.ಪಿ. ತಾವ್ರೊ ಅವರ ಕಾಣಿಕೆ ಬಹಳಷ್ಟಿದೆ. ಅದೇ ಹೊತ್ತು, ನನ್ನ ಜೊತೆ ಹೆಚ್ಚಿನ ವರ್ಷಗಳಲ್ಲಿ ಪದಾಧಿಕಾರಿಗಳಾಗಿ ದುಡಿದ  ಕೆ. ಶ್ರಿನಿವಾಸ ರಾವ್ (ಕಾರ್ಯದರ್ಶಿ), ಅಶೋಕ್ ಹೆಗ್ಡೆ (ಉಪಾಧ್ಯಕ್ಷ), ಹೆನ್ರಿ ಮತಾಯಸ್ / ಚಾರ್ಲ್ಸ್ ದಾಂತಿ (ಕೋಶಾಧಿಕಾರಿ), ಡೊಮಿಯನ್ ನೊರೊನ್ಹಾ / ಜೆಸಿಂತ ಕಸ್ತಲಿನೊ (ಸಹಕಾರ್ಯದರ್ಶಿ), ಸ್ಟೀವನ್ ಜೆ. ಆಳ್ವ / ಜೋನ್ ಪಿ. ಮೆಂಡೋನ್ಸಾ (ಲೆಕ್ಕ ತಪಾಸಣಾಧಿಕಾರಿ) ಕಾರ್ಯಕಾರಿ ಸಮಿತಿಯಲ್ಲಿದ್ದ ಹಾಗೂ ಇತರ ರೂಪದಲ್ಲಿ ಸಹಕರಿಸಿದ ಸಿರಿಲ್ ಡಾಯಸ್, ಮೇರಿ ಸೆಲಿನ್ ಡೇಸ, ರುಜಾರಿಯೊ ಡಿಸೋಜ, ಕ್ಲಾರಾ ಮೆಂಡೋನ್ಸಾ, ಆ್ಯಂಟನಿ ಡೇಸ, ಸ್ಟ್ಯಾನಿ ರೊಡ್ರಿಗಸ್‌, ಆಲ್ಬರ್ಟ್ ಕಸ್ತಲಿನೊ, ವಿಲ್ಸನ್ ಕಸ್ತಲಿನೊ, ವಿಕ್ಟರ್ ಕಸ್ತಲಿನೊ,  ಫ್ರಾನ್ಸಿಸ್ ಡೇಸ, ಸ್ಟ್ಯಾನ್ಲಿ ದಿನಮಣಿ, ಮೋಹನದಾಸ್ ಶೆಟ್ಟಿ, ಹೆಲೆನ್ ಆಲಿಸ್ ಆಳ್ವ, ಸೆವ್ರಿನ್ ಡಿಸೋಜ, ರಾಘವೇಂದ್ರ ರಾವ್, ಅಗಸ್ಟಿನ್ ಲೋಬೊ, ಆರ್ಥರ್ ರೊಡ್ರಿಗಸ್, ಬ್ಯಾಪ್ಟಿಸ್ಟ್ ಜೆ. ಮಾರ್ಟಿಸ್, ಆಗ್ನೇಸ್ ಲೋಬೊ, ತೆರೆಸಾ ಕ್ವಾಡ್ರಸ್, ಡಾ. ಸತೀಶ್ ಶೆಟ್ಟಿ, ರಿಚಾರ್ಡ್ ಆಳ್ವ, ಹ್ಯುಬರ್ಟ್ ಲೋಬೊ,  ನಾರಾಯಣ ಸಾಲಿಯಾನ್, ವಾಲ್ಟ್ಸನ್ ಡೇಸ,  ಸುರೇಶ್ ಪಾಲನ್, ಜುಲಿಯಾನಾ ಕಸ್ತಲಿನೊ, ಲವೀನಾ ಮಿನೇಜಸ್, ಕುಮಾರ, ಪ್ರವೀಣ, ಆನಂದ್ ಮೆಲ್ವಿನ್ ಡಿಸೋಜ, ನವೀನ್ ಶೆಟ್ಟಿ, ಪಾವ್ಲ್ ಕ್ವಾಡ್ರಸ್, ಸ್ಟೀವನ್ ಡಿಸೋಜ, ಭುಜಂಗ ಕೋಟಿಯಾನ್,  ಆಗ್ನೇಸ್ ರೊಡ್ರಿಗಸ್, ಚಂದ್ರಕಾಂತ್ ಡೇಸ, ಆಲ್ಬೀನಾ ಡಿಸೋಜ, ವಿನ್ನಿ ನಜರೆತ್ ಮತ್ತಿತರರು ಸಹಕರಿಸಿದ್ದಾರೆ (ನೆನಪಿನಾಳದಿಂದ ಬರೆದಿದ್ದೇನೆ. ಯಾರದ್ದಾದರೂ ಹೆಸರು ಉಲ್ಲೇಖಿಸಲು ಮರೆತಲ್ಲಿ ಕ್ಷಮೆಯಿರಲಿ).

    ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ಶಾಲೆಗಳ ಅಭಿವೃದ್ಧಿಗಾಗಿ, ವಿದ್ಯಾರ್ಥಿಗಳ ಒಳಿತಿಗಾಗಿ, ಊರಿನ ಒಟ್ಟಾರೆ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳು ಅದೆಷ್ಟೋ... ಕೆಲವೊಂದನ್ನು ಮಾತ್ರ ಉಲ್ಲೇಖಿಸುತ್ತಿದ್ದೇನೆ. ಆಗಿನ  ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ / ವೃತ್ತಿ ಆಯ್ಕೆಯ ಬಗ್ಗೆ ಮಾರ್ಗದರ್ಶನ, ನಿವೃತ್ತ ಶಿಕ್ಷಕರಿಗೆ, ಸಾಧನೆಗೈದ ಹಳೆವಿದ್ಯಾರ್ಥಿಗಳಿಗೆ ಯಥೋಚಿತ ಸತ್ಕಾರ - ಸನ್ಮಾನ, ಎಸ್ಎಸ್ಎಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವ ಪ್ರತೀ ವಿದ್ಯಾರ್ಥಿಗೂ ಬಹುಮಾನ,  ಶಾಲೆಯ ಕಟ್ಟಡಕ್ಕೆ ರೂ. 25,000 ಕೊಡುಗೆ, ಪ್ರೌಢ ಶಾಲೆಗೆ ಟೆಲಿಫೋನ್ ಸವಲತ್ತಿಗಾಗಿ ರೂ. 8400 ನಿರಖು ಠೇವಣಾತಿ, ರೂ.17,000 ವೆಚ್ಚದಲ್ಲಿ ಶಾಲಾ ಸಭಾಂಗಣಕ್ಕೆ 200 ಕುರ್ಚಿ ದಾನ, ಕ್ರೀಡಾ ಸಾಮಗ್ರಿಗಳ ದಾನ, ಪ್ರಾಥಮಿಕ ಶಾಲಾ ಕಟ್ಟಡಕ್ಕೆ ರೂ. 55,555 ದಾನ, ಸಂಘದ ಮತ್ತು ಪ್ರಾಥಮಿಕ ಶಾಲೆಯ ಜಂಟಿ ವಾರ್ಷಿಕೋತ್ಸವಗಳು ಮತ್ತು ತುಳು ನಾಟಕ, ಹಳೆ ವಿದ್ಯಾರ್ಥಿ ಕ್ರೀಡಾಕೂಟ ಸಂಘಟನೆ, ಸಂಘದ ಯೋಜನೆಗಳಿಗಳಿಗೆ ನಿಧಿ  ಜಮಾವಣೆಗಾಗಿ ಸಂಘದ ಸದಸ್ಯರಿಂದ ವಾ ಜಿಲ್ಲೆಯ / ಇತರೆಡೆಯ ಪ್ರಸಿದ್ಧ ನಾಟಕ ತಂಡಗಳಿಂದ ತುಳು ನಾಟಕ / ಇತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. (ಗಮನಿಸಿ: ಆಗ ಹಣ ಈಗಿನಂತೆ ಅಪಮೌಲ್ಯವಾಗಿರಲಿಲ್ಲ).
    ಆಗ ಸಂಘದ ಚಟುವಟಿಕೆಗಳಿಗೆ ಊರ ಪರವೂರಿನಲ್ಲಿ ಉತ್ತಮ ಸ್ಪಂದನೆ  ದೊರಕ್ಕಿದ್ದ ಕಾರಣ  ಸಂಘದ ಎಲ್ಲಾ ಚಟುವಟಿಕೆಗಳು ಸುಫಲವಾಗಿದ್ದವು)  ನಾನು ಮತ್ತು ಶ್ರೀನಿವಾಸ ರಾವ್  ಮೋಟಾರ್ ಬೈಕಲ್ಲಿ ಧರ್ಮಸ್ಥಳಕ್ಕೆತೆರಳಿ ಗೌರವಾನ್ವಿತ ಖಾವಂದ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಹಣಕಾಸಿನ ನೆರವು ತಂದದ್ದೂ ಇದೆ. ಊರ ಪರವೂರ ಹಳೆವಿದ್ಯಾರ್ಥಿಗಳು, ಹಿತೈಷಿಗಳು ನಮ್ಮ ಯೋಜನೆಗಳನ್ನು ಫಲಪ್ರದಗೊಳಿಸುತ್ತಿದ್ದರು. 

    ನನ್ನ ಅವಧಿ ಬಗ್ಗೆ ಬರೆಯುವುದು ಇನ್ನೂ ಇದೆ.  ಸಂಘದ ಪದಾಧಿಕಾರಿ - ಸದಸ್ಯರ, ಹಳೆ ವಿದ್ಯಾರ್ಥಿಗಳ, ಊರ ಜನರ ಮತ್ತು ಹಿತೈಷಿಗಳ ಸಹಕಾರದಿಂದಾಗಿ ಎಲ್ಲವೂ ಸಾಧ್ಯವಾಗಿತ್ತು ಎನ್ನುವ ಕೃತಜ್ಞತೆಯ ಭಾವನೆ ಇನ್ನೂ ಉಳಿದಿದೆ. ಸರ್ವರ ಉಪಕಾರ ಸ್ಮರಿಸುತ್ತೇನೆ.
    ಎಚ್. ಆರ್. ಆಳ್ವ      
    M.A., LL.B., D. Chem. Engg.

  • Domian R Noronha

    ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿಧ್ಯಾಥಿ೯ ಸಂಘವು 1984 ರಲ್ಲಿ ಪ್ರಾರಂಭಗೊಂಡು
    ಇಂದಿನವರೆಗೆ ಸುಮಾರು 40 ವಷ೯ ಶಾಲೆಯ ಹಿತಕ್ಕಾಗಿ ಶ್ರಮಿಸುತ್ತಿದೆ 
    ಶ್ರೀಯುತ H R Alva ರವರ ಮುತುವಜಿ೯ಯಿಂದ  ದಿ। ರತ್ನಾಕರ ಶೆಟ್ಟಿಯವರು ಪ್ರಥಮ ಅಧ್ಯಕ್ಷರಾಗಿ ತದನಂತರ ಶ್ರೀಯುತ ಎಚ್. ಆರ್ ಆಲ್ವರವರು ಸತತ 9 ವಷ೯ಗಳ ಕಾಲ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿದರು,ಈ ಅವಧಿಯಲ್ಲಿ ಅನೇಕ ಪ್ರಗತಿಪರ ಕೆಲಸಗಳು ನಡೆದಿವೆ. ಅಂದಿನಿಂದ ಇಂದಿನವರೆಗೆ ನಾನು ಕಾಯ೯ಕಾರಿ ಸಮಿತಿಯಲ್ಲಿ ಇದ್ದುಕೊಂಡು ಕಾಯ೯ದಶಿ೯ಯಾಗಿ, ಖಜಾಂಜಿಯಾಗಿ  12 ವಷ೯ ಹಾಗೂ ಅಧ್ಯಕ್ಷನಾಗಿ  ಸಂಘ ಪ್ರಾರಂಭದಿಂದ ಇಂದಿನವರೆಗೆ ಸಕ್ರೀಯ 
    ಸದಸ್ಸನಾಗಿರುತ್ತೇನೆ.

    ಸಂಘದ ಸಾಧನೆಗಳಲ್ಲಿ ಮುಖ್ಯವಾಗಿ ಕನ್ನಡ ಮಾದ್ಯಮ ಪ್ರೌಢಶಾಲೆಯ ಹೊಸ ಕಟ್ಟಡ ನಿಮಿ೯ಸುವ ಸಂದಭ೯ದಲ್ಲಿ ಒಂದು ತರಗತಿ ಕೋಣೆಯ ವೆಚ್ಚ ಸುಮಾರು
    20000 ರೂ. ( 1985 ) ನೀಡಲಾಗಿತ್ತು ಪ್ರೌಢಶಾಲೆಗೆ ದೂರವಾಣಿ  ಸಂಪಕ೯  ವಾಚನಾಲಯ ನಿಮಾ೯ಣಕ್ಕೆ ಸಹಾಯ ಆಟದ ಮೈದಾನ ನವೀಕರಣ ಶಾಲಾ ವಿಶೇಷ ಕಾಯ೯ಕ್ರಮಗಳಲ್ಲಿ ನಮ್ಮ  ಸಹಕಾರವನ್ನು ನೀಡುತ್ತಾ ಬಂದಿದ್ದೇವೆಕಳೆದ 2 ವಷ೯ದಿಂದ  ಪ್ರಾಥಮಿಕ ಶಾಲೆಯ  ಗೌರವ ಶಿಕ್ಷಕಿಗೆ ಗೌರವಧನ ನೀಡುತ್ತಿದ್ದೇವೆ

    ಕಳೆದ 40 ವಷ೯ದಲ್ಲಿ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿ ಶಾಲೆಯ ಹಿತಕ್ಕಾಗಿಶ್ರಮಿಸಿದ್ದಾರೆ ಅವರನ್ನು ಸ್ಮರಿಸುತ್ತಾ ಮುಖ್ಯವಾಗಿ ಸಂಘದ ಕಾಯ೯ಕ್ರಮಗಳಿಗೆ
    ತನು ಮನ ಧನಗಳಿಂದ ಪ್ರೊತ್ಸಾಹಿಸುವ ನಮ್ಮ ಹಳೆ ವಿಧ್ಯಾಥಿ೯ಗಳನ್ನು ಊರ ವಿಧ್ಯಾಭಿಮಾನಿಗಳನ್ನು ಹಾಗೂ ಧಾನಿಗಳನ್ನು ಸ್ಮರಿಸುತ್ತಾ ಮುಂದಿನ ದಿನಗಳಲ್ಲಿಯೂ ತಮ್ಮ ಸಹಕಾರವನ್ನುಕೋರುತ್ತೇವೆ. ಹಳೆ ವಿಧ್ಯಾಥಿ೯ ಸಂಘವು  ಚಿರಾಯುವಾಗಲಿ ಎಂದು ಹರಸುತ್ತಾ  ನನ್ನ ಮಾತುಗಳಿಗೆ ಪೂಣ೯ವಿರಾಮ ನೀಡುತ್ತೇನೆ.
                    
    ಡೊಮಿಯನ್ ಆರ್. ನೊರೊನ್ನ
    ನಿಕಟಪೂವ೯ ಅಧ್ಯಕ್ಷರು

  • Peter Martis

    ಹಳೆಯ ವಿದ್ಯಾರ್ಥಿ ಸಂಘದಲ್ಲಿ ನನ್ನ ಕೆಲವು ಸಿಹಿ ನೆನಪುಗಳು.

    ನಾನು ಎರಡು ಬಾರಿ ಹಳೆಯ ದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದೆ. ಇದು ನನಗೆ ಉತ್ತಮ ಕಲಿಕೆಯಾಗಿದೆ ಮತ್ತು ನಾನು ಎಲ್ಲಾ ಕರ್ತವ್ಯಗಳನ್ನು ಹೆಚ್ಚಿನ ಜವಾಬ್ದಾರಿಯಿಂದ ಮಾಡಿದ್ದೇನೆ. ಎಲ್ಲಾ ಸದಸ್ಯರು ಪ್ರತಿಯೊಂದು ಕೆಲಸದಲ್ಲಿ ತುಂಬಾ ಗ್ಗಟ್ಟಾಗಿದ್ದರು. ಮತ್ತು ಪ್ರತಿಯೊಂದು ಕೆಲಸದಲ್ಲೂ ಏಕತೆ ಇತ್ತು. ನನ್ನ ಅಧ್ಯಕ್ಷರ ಅವಧಿಯಲ್ಲಿ ಶಾಲಾ ಬೇಲಿ ಹಾಕುವ ಅವಶ್ಯಕತೆಯಿದೆ ಎಂದು ನಾವು ಕಂಡುಕೊಂಡಿದ್ದೇವೆ, ಅಲ್ಲಿ ನಾವು ಹಳೆಯ  ದ್ಯಾರ್ಥಿಗಳಿಂದ ಹಣವನ್ನು ಸಂಗ್ರಹಿಸಿದ್ದೇವೆ ಮತ್ತು ಶಾಲೆಯ ಅಗತ್ಯವನ್ನು ಪೂರ್ಣಗೊಳಿಸಿದ್ದೇವೆ (ರಸ್ತೆಯ ಬದಿಯಲ್ಲಿ ಫೆನ್ಸಿಂಗ್). ನನ್ನ ಅಧ್ಯಕ್ಷರ ಅವಧಿಯಲ್ಲಿ ಪ್ರತಿ ವರ್ಷ ಶಾಲೆಗೆ ನೆರವು ನೀಡುತ್ತಿದ್ದೆವು. ಹಲವು ವರ್ಷಗಳಿಂದ ನಾವು ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದ್ದೇವೆ ಮತ್ತು ಬಹಳಷ್ಟು ತಂಡಗಳು ಭಾಗವಹಿಸುತ್ತಿದ್ದವು.  ಈ ಕಾರ್ಯಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳು ಉದಾರವಾಗಿ ಹಣ ನೀಡಿದರು. ನಾನು ಸುಮಾರು 20 ಬಾರಿ ನಾಟಕದಲ್ಲಿ ನಟಿಸಿದ್ದೇನೆ. ಮತ್ತು ಇಂದಿನವರೆಗೂ ನಾಟಕದ ಆಯೋಜನೆಯ ಜವಾಬ್ದಾರಿಯನ್ನು ನನಗೆ ನೀಡಲಾಗಿದೆ.  ನಾನು ಪ್ರತಿ ಸಭೆಗಳಿಗೆ ಹಾಜರಾಗುತ್ತೇನೆ, ನಾನು ಹಳೆಯ ವಿದ್ಯಾರ್ಥಿಗಳ ಸಕ್ರಿಯ ಸಮಿತಿ ಸದಸ್ಯ. ನಾನು ಸಕ್ರಿಯ ಸದಸ್ಯ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ. ನಮ್ಮ ಹಳೆಯ ವಿದ್ಯಾರ್ಥಿ ಸಂಘಕ್ಕೆ ನಾನು ಶುಭ ಹಾರೈಸುತ್ತೇನೆ, ಹಳೆಯ ವಿದ್ಯಾರ್ಥಿ ಸಂಘವು ಚಿರಾಯುವಾಗಲಿ.

  • ಅನಿಲ್ ಡೇಸಾ. ಶಂಕರಪುರ.- Anil Dsa

     ಎಲ್ಲರಿಗೂ ನಮಸ್ಕಾರ, ಸಂತ ಜೋನ ಶಾಲಾ   ಹಳೆ ವಿದ್ಯಾರ್ಥಿಯಾಗಿ ಅದರಲ್ಲೂ ಕೂಡ ಹಳೆ ವಿದ್ಯಾರ್ಥಿ ಸಂಘದ ರಜತ  ಮಹೋತ್ಸವದ  ಸಂದರ್ಭ, ಸಂಘದ ಅಧ್ಯಕ್ಷನಾಗುವ ಅದೃಷ್ಟ ನನ್ನ ಪಾಲಿಗೆ ಬಂದಿರದು ನನಗೆ ಸಂತೋಷದ ವಿಷಯವಾಗಿರುತ್ತದೆ. ಆ ವರ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಒಂದು ತುಳು ನಾಟಕವನ್ನು ಕೂಡ ನಾವು ಆಯೋಜಿಸಿರುತ್ತೇವೆ . ಸಂತ  ಜೋನ್ ಪಿಯು ಕಾಲೇಜುಗೆ ಆ ವರ್ಷ ಕಟ್ಟಡಕ್ಕಾಗಿ ದೇಣಿಗೆಯನ್ನು ಕೂಡ ನೀಡಿರುತ್ತೇವೆ. ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಿಗೆ, ಅಧ್ಯಾಪಕರಿಗೆ ಅವರ ಮನೆಗೆ ಹೋಗಿ ಸನ್ಮಾನಿಸಿರುತ್ತೇವೆ. ನಮ್ಮ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಈಗ ರಾಜ್ಯದಲ್ಲಿ, ದೇಶದಲ್ಲಿ,  ಹಾಗೂ ಹೊರದೇಶದಲ್ಲಿ ವಿವಿಧ ಉನ್ನತ ಹುದ್ದೆಯನ್ನು ಅಲಂಕರಿಸುತ್ತಿದ್ದಾರೆ,  ಇದು ನಮಗೆಲ್ಲ ಹೆಮ್ಮೆಯ ವಿಚಾರ. ಪ್ರಸ್ತುತ ನಮ್ಮ ಹೆಮ್ಮೆ ಹಳೇ ವಿದ್ಯಾರ್ಥಿ, ಫ್ರಾನ್ಸಿಸ್ ಡಿಸೋಜ ಇವರ ನೇತೃತ್ವದಲ್ಲಿ ಕೈಗೊಂಡ ಎಲ್ಲ ಕೆಲಸಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ. ಹಾಗೂ ನಮ್ಮ ಶಾಲಾ ಹಳೆ ವಿದ್ಯಾರ್ಥಿಗಳು ನಮ್ಮ ಸಂಘಟನೆಯನ್ನು ಸೇರಿ ಇದನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಆಗಬೇಕು ಎಂದು ನನ್ನ ಕಳಕಳಿಯ ವಿನಂತಿ.



  • Rayan Fernandes

     ಸೈಂಟ್ ಜೋನ್ಸ್ ಆಕಾಡೆವಿುಯಿಂದ , ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದು ನನ್ನ ಪಾಲಿಗೆ ಇದು ಹೆಮ್ಮೆಯ ವಿಷಯವಾಗಿದೆ.ನಾನು ಅಧ್ಯಕ್ಷನಿದ್ದ ಆ ಸಮಯದಲ್ಲಿ ಕೋವಿಡ್ ಇದ್ದ ಕಾರಣ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು " ಎಂಬುದರ ಬಗ್ಗೆ  ಒನ್ ಲೈನ್ ಸೆವಿುನರ್ ನಡೆಸಿದ್ದೇವೆ.ಹಳೆ ವಿಧ್ಯಾರ್ಥಿಗಳಿಗೆ

                    "ನನ್ನ ಶಾಲೆಯ ಸವಿನೆನಪು" ಎಂಬ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು


    ಶಾಲೆಯೊಡನೆ  ಪೊಟೊ ಸ್ಪರ್ಧೆಯನ್ನು ನಡೆಸಲಾಯಿತು.ಈ ಸ್ಫರ್ಧೆಯಲ್ಲಿ ಹಲವಾರು ಹಳೆ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ನೀಡಲಾಯಿತು.ಶಾಲೆಯ ವಿಧ್ಯಾರ್ಥಿಗಳಿಗೆ ಹಲವಾರು ಕಾರ್ಯಕ್ರದreg;ಗಳನ್ನು ,

    ಕ್ವಿಜ್ ಸ್ಫರ್ಧೆಯನ್ನು  ಆಯೋಜಿಸಲಾಗಿತ್ತು. ನಾನು ಅಧ್ಯಕ್ಷನಾಗಿದ್ದ ಸದreg;ಯದಲ್ಲಿ ನನಗೆ ಎಲ್ಲಾ ರೀತಿಯಲ್ಲಿ ಸಹಕರಿಸಿದ ಸೈಂಟ್ ಜೋನ್ಸ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫರ್ಡಿನಾಂಡ್ ಗೊನ್ಸಾಲ್ವೀಸ್ ರವರಿಗೆ , ನಾಲ್ಕು ಶಾಲೆಗಳ ಮುಖ್ಯೋಪಾಧ್ಯಾಯರು ಶಿಕ್ಷಕ ವ್ರಂದಕ್ಕೆ ಹಾಗೂ ಹಳೆ ವಿಧ್ಯಾರ್ಥಿ ಸಂಘದ ಕಾರ್ಯಕಾರಿ ಸವಿುತಿಯ ಎಲ್ಲಾ ಸದಸ್ಯರಿಗೆ ಚಿರ ಋಣಿಯಾಗಿದ್ದೆೇನೆ. ಹಳೆ ವಿಧ್ಯಾರ್ಥಿ ಸಂಘವನ್ನು ನಾವು ಇನ್ನಷ್ಟು ಬಲಿಷ್ಟ  ಶಾಲೆಯ ಅಭಿವ್ರದ್ದಿಗಾಗಿ ಹಾಗೂ ವಿಧ್ಯಾರ್ಥಿಗಳ ಒಳಿತಿಗಾಗಿ ಒಳ್ಳೆಯ ಕಾರ್ಯಕ್ರಮ ಳನ್ನು ದreg;ತ್ತು ಬಡ ವಿಧ್ಯಾರ್ಥಿಗಳ ವಿಧ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯವನ್ನು ನೀಡಲು ಸಹಕರಿಸಿ ಹಳೆವಿಧ್ಯಾರ್ಥಿ ಸಂಘವನ್ನು  ಬೆಳವಣಿಗೆಯ ಕಡೆಗೆ ಮುಂದಕ್ಕೆ ತೆಗೆದುಕೊಳ್ಳಿ  ಕೇಳಿಕೊಳ್ಳುತ್ತೇನೆ. ಸರ್ವರ ಉಪಕಾರವನ್ನು ಸ್ದreg;ರಿಸುತ್ತೇನೆ.

    .... ರಾಯನ್ ಫೆರ್ನಾಂಡಿಸ್ ( ಬಿ.ಕಾಂದreg;್, ಎಲ್.ಎಲ್.ಬಿ, ಎಲ್ .ಎಲ್.ಎದreg;್.)

  • Sylvia Winifred castelino

    ಸಿಲ್ವೀಯಾ ಕಸ್ತೇಲಿನೊ.

    ಸಂತ ಜೋನ್ಸ್ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು 1981 ರಲ್ಲಿ ಸ್ಥಾಪನೆಯಾದ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿಯ ಮೊದಲ ಬ್ಯಾಚಿನ ವಿದ್ಯಾರ್ಥಿ ಎಂಬುದು ನನ್ನ ಪಾಲಿಗೆ ಸಿಕ್ಕಿದ ಗೌರವದ ಕ್ಷಣ ವಿದ್ಯಾರ್ಥಿ ಜೀವನ ಮುಗಿಸಿದ ನನಗೆ ಶಾಲೆಯ ಸ್ಪರ್ಶವು ಮುಗಿದಿರಲಿಲ್ಲ. ಶಾಲೆಯ ನಿಕಟ ಸಂಬಂಧದೊಂದಿಗೆ ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾಗಿ ದುಡಿದು 2013 ಮತ್ತು 2015ರಲ್ಲಿ  ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ 2016- 2018 ಅಧ್ಯಕ್ಷರಾಗಿ ದುಡಿದದ್ದು ನನ್ನ ಪಾಲಿನ ಯೋಗವೇ ಸರಿ. ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಎರಡು ವರ್ಷ ಹಾಗೂ ಕಾರ್ಯದರ್ಶಿಯಾಗಿ ಎರಡು ವರ್ಷದ ಅನುಭವ ಅವಿಸ್ಮರಣೀಯ ಕ್ಷಣ .ಮೊಟ್ಟ ಮೊದಲು ಈ ಸಂಘದಲ್ಲಿದ್ದು ನನಗೆ ಸಹಕರಿಸಿದ ಹಿರಿಯರಿಗೆ ಹಾಗೂ ಕಿರಿಯರಿಗೆ ಸ್ಮರಿಸುತ್ತೇನೆ. ನನಗೆ ಸಿಕ್ಕ ಅವಧಿಯಲ್ಲಿ ದಾನಿಗಳ ಸಹಕಾರದಿಂದ ಹಾಗೂ ಹಿರಿಯರ ಮಾರ್ಗದರ್ಶನದಿಂದ ನಾನು ಮಾಡಿದ ಸಣ್ಣ ಪುಟ್ಟ ಕಾರ್ಯಕ್ರಮಗಳ ಬಗ್ಗೆ ನಿಮ್ಮೊಂದಿಗೆ 
     ಹಂಚಿಕೊಳ್ಳಲು ಇಚ್ಛಿಸುತ್ತೇನೆ.
    ಜೇಸಿಐ ಶಂಕರಪುರ ಜತೆ ಕೆಸರುಗದ್ದೆ ಕ್ರೀಡಾಕೂಟ  ಕಾರ್ಯಕ್ರಮ ಆಯೋಜನೆ .  ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ .  ಗಾಂಧಿ ಜಯಂತಿಯ ದಿವಸ ವಿವಿಧ ಬಸ್ಸು ನಿಲ್ದಾಣಗಳ ಸ್ವಚ್ಛತೆ 
     ನಿವೃತ್ತ ಶಿಕ್ಷಕರಿಗೆ ಸನ್ಮಾನ . ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ.  ಶಾಲೆಯಲ್ಲಿ ನಡೆಯುವಂತಹ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ .
    ವಿವಿಧ ಸಂಘಟನೆಗಳೊಂದಿಗೆ ಕೂಡಿ ಆರೋಗ್ಯ ತರಬೇತಿ ಶಿಬಿರ .ರಾಷ್ಟ್ರೀಯ ಭಾವೈಕ್ಯ ದಿನಾಚರಣೆ.ಹಳೆ ವಿದ್ಯಾರ್ಥಿ ಸಂಘದ ಕ್ರೀಡಾಕೂಟ ಯೋಜನೆ .ಪ್ರತಿ ಎರಡು ತಿಂಗಳಿಗೊಮ್ಮೆ ಸದಸ್ಯರ ಸಭೆ .ವಾರ್ಷಿಕ ಮಹಾಸಭೆ ಆಯೋಜನೆ .ಪಾರದರ್ಶಕವಾದ ಲೆಕ್ಕಪತ್ರ ಮಂಡನೆಯೊಂದಿಗೆ ನೂತನ ಅಧ್ಯಕ್ಷರ ಆಯ್ಕೆ .ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ .
    ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತ್ಯೇಕವಾದ ವಾರ್ಷಿಕೋತ್ಸವ ಆಯೋಜನೆ.ಸಭಾ ಕಾರ್ಯಕ್ರಮ,ವಿವಿಧ ಪ್ರತಿಭೆಗಳಿಗೆ ಪ್ರೋತ್ಸಾಹ, ಹಳೆ ವಿದ್ಯಾರ್ಥಿ ಸದಸ್ಯರ ನಾಟಕ ಪ್ರದರ್ಶನ. ಇತ್ತೀಚಿನ ವರ್ಷಗಳಲ್ಲಿ ನಾಟಕ ಪ್ರದರ್ಶನದಲ್ಲಿ ನಾನು ಅಭಿನಯಿಸುತ್ತಿರುವುದು ನನಗೆ ಸಿಕ್ಕಿರುವ ಅವಕಾಶ ಎಂದೇ ಭಾವಿಸಿದ್ದೇನೆ ನನ್ನ ಅವಧಿಯಲ್ಲಿ ಶಾಲಾ ಸಂಚಾಲಕರಾಗಿದ್ದ ವಂದನೀಯ ಲೆಸ್ಲಿ ಡಿಸೋಜ , ನಾಲ್ಕೂ ಶಾಲಾ ಮುಖ್ಯಸ್ಥರಿಗೆ , ಕಾರ್ಯಕಾರಿ ಸವಿುತಿಯ ಸದಸ್ಯರಿಗೆ , ದಾನಿಗಳಿಗೆ ತಮ್ಮ ಉಪಕಾರ ಸ್ಮರಿಸುತ್ತಾ ಪ್ರಸ್ತುತ ಹಳೆ ವಿಧ್ಯಾರ್ಥಿ ಸಂಘದ ಚುಕ್ಕಾಣಿ ಹಿಡಿದ ಅಧ್ಯಕ್ಷರಿಗೆ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆ ಬಯಸುತ್ತಾ ಬರುವ ವರುಷದಲ್ಲಿ ಹಳೆ ವಿಧ್ಯಾರ್ಥಿ ಸಂಘವು ಒಗ್ಗಟ್ಟಿನಲ್ಲಿ ಮುನ್ನಡೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

    ......ಸಿಲ್ವೀಯಾ ಕಸ್ತೇಲಿನೊ .......

  • Naveen Ameen

    dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . .

  • Walston Juvenish Dsa

    dummy write up for testing only  write up coming soon . dummy write up for testing only  write up coming soon . dummy write up for testing only  write up coming soon .W dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon

  • Victor Mendonca

    dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon dummy write up for testing only  write up coming soon . dummy write up for testing only  write up coming soon 

  • Denzil Casrelino


     dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon . dummy write up for testing only  write up coming soon .