ಸೈಂಟ್ ಜೋನ್ಸ್ ಪ್ರೌಢಶಾಲೆಯು ದಿ| ರೆ|ಫಾ| ಜಿ. ಬಿ. ಡಿಸೋಜರವರ ದೂರದೃಷ್ಠಿಯ ಫಲವಾಗಿದೆ. ಕಳೆದ ೪೩ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅಗತ್ಯದ ಪ್ರೌಢಶಿಕ್ಷಣವನ್ನು ನಮ್ಮದೇ ಪರಿಸರದಲ್ಲಿ ನೀಡಿ, ಉತ್ತಮ ಭವಿಷ್ಯವನ್ನು ರೂಪಿಸುವಲ್ಲಿ ಭದ್ರ ಅಡಿಪಾಯ ಹಾಕಿ ಕೊಟ್ಟ ಹಿರಿಮೆ ನಮ್ಮ ಪ್ರೌಢ ಶಾಲೆಗೆ ಸಲ್ಲುತ್ತದೆ. ಪ್ರಸ್ತುತ ಸಂಚಾಲಕರಾಗಿರುವ ರೆ|ಫಾ|ಡಾ| ಪ್ರಕಾಶ್ ಅನಿಲ್ ಕ್ಯಾಸ್ತಲಿನೋರವರ ಮಾರ್ಗದರ್ಶನದಲ್ಲಿ ಶಾಲೆಯು ಉತ್ತಮವಾಗಿ ಮುನ್ನಡೆಯುತ್ತದೆ.
ಶಾಲೆಯ ಸ್ಥಾಪನೆಯೊಂದಿಗೆ, ವಿದ್ಯಾಸಂಸ್ಥೆಯ ಪ್ರಗತಿಗಾಗಿ ಕರ‍್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ ಎಲ್ಲಾ ಸಂಚಾಲಕರನ್ನು ಸ್ಮರಿಸುತ್ತೇನೆ. ಇವರ ಮಾರ್ಗದರ್ಶನದಲ್ಲಿ ನಿವೃತ್ತ ಮುಖ್ಯಶಿಕ್ಷಕರುಗಳಾದ ದಿ| ಪಿ. ವಿಠ್ಠಲ್ ಶೆಣೈ, ಶ್ರೀ ಜೋನ್ ಲೋಬೊ, ಶ್ರೀಮತಿ ಕ್ಲಾರಾ ಡಬ್ಲೂö್ಯ ಮೆಂಡೋನ್ಸಾ, ಶ್ರೀ ಮೋಹನ್‌ದಾಸ್ .ಆರ್. ಶೆಟ್ಟಿ, ತಮ್ಮ ಅವಿರತ ಶ್ರಮದಿಂದ ಸಂಸ್ಥೆಯನ್ನು ಪ್ರಗತಿ ಪಥದಲ್ಲಿ ಮುನ್ನಡೆಸಿದ್ದಾರೆ. ಶಾಲಾ ಸ್ಥಾಪನೆಗಾಗಿ ದುಡಿದ ಮಹನೀಯರು, ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ, ವರ್ಗಾವಣೆಗೊಂಡ ಶಿಕ್ಷಕ-ಶಿಕ್ಷಕೇತರ ವೃಂದವನ್ನು ಸ್ಮರಿಸಿ ಇವರೆಲ್ಲರಿಗೂ ಉತ್ತಮ ಆರೋಗ್ಯವನ್ನು ಬಯಸುದರೊಂದಿಗೆ, ಈಗಲೂ ಅವರು ಶಾಲೆ ಮೇಲೆ ತೋರಿಸುತ್ತಿರುವ ಪ್ರೀತಿ, ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
ಪ್ರಸ್ತುತ ಶಾಲೆಯಲ್ಲಿ ೧೩೫ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದು, ೬ ಮಂದಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಕಛೇರಿ ಕೆಲಸದಲ್ಲಿ ಶ್ರೀ ಐವನ್ ರೊಡ್ರಿಗಸ್ ಸಹಕರಿಸಿದರೆ, ಕಂಪ್ಯೂಟರ್ ಶಿಕ್ಷಕಿಯಾಗಿ ಕು| ಸುಮಿತ್ರಾ ಸೇವೆ ಸಲ್ಲಿಸುತ್ತಿದ್ದಾರೆ.
ಐತಿಹಾಸಿಕವಾದ ೧೦೦% ಫಲಿತಾಂಶವು ೨೦೨೩-೨೪ನೇ ಸಾಲಿನ S.S.L.C ಅ ಬ್ಯಾಚಿನ ವಿದ್ಯಾರ್ಥಿಗಳಿಂದ ಪ್ರಥಮ ಬಾರಿಗೆ ದಾಖಲಾಗಿದೆ. ಕನ್ನಡ ಮಾಧ್ಯಮದ ಮಕ್ಕಳು ಪ್ರಸ್ತುತ ಐಡಿಕಾರ್ಡ್, Shoe, Track Pant, Tshirt ಧರಿಸುತ್ತಿದ್ದಾರೆ. ಜೊತೆಗೆ ಉಚಿತ ಕಂಪ್ಯೂಟರ್ ಶಿಕ್ಷಣ ಲಭ್ಯವಾಗಿದೆ.
ಪ್ರತಿ ಶೈಕ್ಷಣಿಕ ವರ್ಷದಲ್ಲಿ ದಾನಿಗಳು, ಶಾಲಾ ಶಿಕ್ಷಕವೃಂದ, ಇನ್ನರ್‌ವೀಲ್, ಎಮಿರೇಟ್ಸ್ ಪಾಂಗಲೈಟ್ಸ್ ಸಂಸ್ಥೆಗಳ ಸಹಕಾರದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕಗಳು, Uniforms, Scholl Fees, , ಶಾಲೆಗೆ ಬರಲು ಬಸ್ ದರ, ಉಚಿತವಾಗಿ ನೀಡುತ್ತಿದ್ದೇವೆ.
“ಹಳೆ ವಿದ್ಯಾರ್ಥಿಗಳೇ ನಮ್ಮ ಶಾಲೆಯ ಆಸ್ತಿ
ಶಾಲಾಭಿಮಾನಿಗಳೇ ನಮ್ಮ ಶಾಲೆಗೆ ಆಸರೆ”
ಶಾಲಾಭಿಮಾನಿಗಳು, ಹಳೆ ವಿದ್ಯಾರ್ಥಿಗಳ, ಹಿತೈಷಿಗಳ ಆರ್ಥಿಕ ಸಹಾಯದ ನೆರವಿನಿಂದ ೨೦೨೨ ರಲ್ಲಿ ಶಾಲಾ ಮಾಣಿಕ್ಯೋತ್ಸವವನ್ನು ಸಂಭ್ರಮದಿAದ ಆಚರಿಸಿ, ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಕಂಪ್ಯೂಟರ್ ಕೊಠಡಿ, ಶಾಲಾ ಮೇಲ್ಛಾವಣಿಯ ದುರಸ್ತಿ, ಶಾಲೆಗೆ ಸುಣ್ಣ-ಬಣ್ಣ, ಕ್ರೀಡಾ ನಿರ್ಮಾಣ, ಅಗ್ನಿನಂದಕ ವ್ಯವಸ್ಥೆ ಅಳವಡಿಕೆ, ಪ್ರೊಜೆಕ್ಟರ್, ‘ಜ್ಞಾನಮಾಣಿಕ್ಯ’ ಸಂಚಿಕೆ ಮುಖ್ಯವಾದವುಗಳು.
ಊರ ಸಮುದಾಯದೊಂದಿಗೆ ಶಾಲೆಯ ಸಾಮಿಪ್ಯ ಹೆಚ್ಚಿಸಲು ಪೂರಕವಾದ ೨೦೧೯ರ ಡಿಸೆಂಬರ್‌ನಲ್ಲಿ ಆಯೋಜಿಸಿದ ಉಡುಪಿ ತಾಲೂಕು ಮಟ್ಟದ ಸೇವಾದಳದ ಮಕ್ಕಳ ಮೇಳ ೧೨೦೦ ಮಕ್ಕಳಿಗೆ ಅತಿಥ್ಯ ನೀಡಿತ್ತು. ಕಳೆದ ವರ್ಷದಲ್ಲಿ ಉಡುಪಿ ತಾಲ್ಲೂಕು ಮಟ್ಟದ ಹುಡುಗಿಯರ ವಾಲಿಬಾಲ್ ಪಂದ್ಯಾಟವನ್ನು ನಮ್ಮ ಶಾಲೆ ಯಶಸ್ವಿಯಾಗಿ ಸಂಘಟಿಸಿದೆ.
‘REUNION ಹೆಸರಿನಲ್ಲಿ ಜರಗಿದ ೧೯೮೮, ೧೯೮೯, ೧೯೯೭, ೨೦೦೪ ರ ಹಿರಿಯ ವಿದ್ಯಾರ್ಥಿಗಳ ಸ್ನೇಹಕೂಟಗಳು, ಗುರುವರ್ಯರನ್ನು ಸನ್ಮಾನಿಸಿ, ಸಂಭ್ರಮಿಸಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾದುದು. ಹಾಗೂ ಶಾಲೆಗೆ ನೀಡಿದ ಕೊಡುಗೆಗಳು ಉಲ್ಲೇಖನೀಯ. ಅಷ್ಟೇ ಅಲ್ಲದೆ ಉಳಿದ ಹಳೆ ವಿದ್ಯಾರ್ಥಿಗಳು ವಿವಿಧ ಸಂದರ್ಭ, ಸನ್ನಿವೇಶಗಳಲ್ಲಿ ವಿವಿಧ ಶಾಲಾ ಅಗತ್ಯತೆಗಳಿಗೆ ಸ್ಪಂದಿಸಿ, ಶಾಲೆಗೆ ನೆರವಾಗಿದ್ದಾರೆ. ಅವರೆಲ್ಲರನ್ನು ಈ ಸಮಧರ್ಭದಲ್ಲಿ ನೆನೆದು, ಸಂತ ಜೋನರ ಕೃಪಾವರಗಳನ್ನು ಬೇಡುತ್ತೇನೆ. ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಸಹಕಾರ ಶಾಲೆಯ ಜೊತೆಗಿರಲಿ ಎಂದು ಆಶಿಸುತ್ತೇನೆ.
ಸೈಂಟ್ ಜೋನ್ಸ್ ಪ್ರೌಢಶಾಲೆಯ ಪ್ರಸ್ತುತ ಅಗತ್ಯತೆಗಳು
• ಕಂಪ್ಯೂಟರ್ ಶಿಕ್ಷಕಿಗೆ ಗೌರವಧನ (ವಾರ್ಷಿಕ ರೂ.೫೪,೦೦೦)
• ಶಾಲಾ ವಾಲಿಬಾಲ್ ತಂಡಕ್ಕೆ ತರಬೇತಿ ನೀಡಲು ತರಬೇತುದಾರನಿಗೆ ಗೌರವಧನ (ನಾಲ್ಕು ತಿಂಗಳಿಗೆ ರೂ.೨೮,೦೦೦)
• ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅವಶ್ಯಕತೆ ಇರುವ ವಿದ್ಯಾರ್ಥಿಗಳಿಗೆ ಪುಸ್ತಕ, ಯೂನಿಫಾರ್ಮ್, ಫೀಸ್, ಬಸ್‌ದರ ನೀಡಲು ತಗಲುವ ಅಂದಾಜು ವೆಚ್ಚ ರೂ.೪೦,೦೦೦.
ಶಾಲೆಗಾಗಿ ಮುಂದಿನ ಯೋಜನೆಗಳು
• ಸುಮಾರು ೪೦ ವರ್ಷಗಳಷ್ಟು ಹಳೆಯದಾದ ಶಾಲಾ ಮೇಲ್ಛಾವಣಿಯ ಹಂಚುಗಳ ಬದಲಾವಣೆ. (ಅಂದಾಜುವೆಚ್ಚ ರೂ.೧,೨೫,೦೦೦)
• ಶಾಲಾ ವಿದ್ಯುತ್ ಬಿಲ್ ಪಾವತಿ ಶೂನ್ಯ ಮಾಡಲು 5KW ಸಾಮರ್ಥ್ಯದ ಸೋಲಾರ್ ಅಳವಡಿಕೆ. (ಖರ್ಚು ಅಂದಾಜು ೪ ಲಕ್ಷ)
ಸೈಂಟ್ ಜೋನ್ಸ್ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಗೈದ ಹಿರಿಯ, ಕಿರಿಯ ವಿದ್ಯಾರ್ಥಿಗಳನ್ನು ಅಂತರ್ಜಾಲದ ಮೂಲಕ ಬೆಸೆಯಲು ‘ಜಾಲತಾಣವನ್ನು Website ರಚಿಸಲು ಅಪಾರ ಶ್ರಮವಹಿಸಿದ ಪ್ರಸ್ತುತ ಹಳೆ ವಿದ್ಯಾರ್ಥಿ ಸಂಘದ ಕ್ರೀಯಾಶೀಲ ಅಧ್ಯಕ್ಷರಾಗಿರುವ ಶ್ರೀ ಫ್ರಾನ್ಸಿಸ್ ಪ್ರಕಾಶ್ ಡಿಸೋಜ ಇವರನ್ನು ಅಭಿನಂದಿಸಿ ಈ ಕರ‍್ಯಕ್ಕೆ ಶುಭಕೋರುತ್ತೇನೆ.
ಧನ್ಯವಾದಗಳೊಂದಿಗೆ ಮುಖ್ಯ ಶಿಕ್ಷಕರು
ಅಶ್ವಿನ್ ರೊಡ್ರಿಗಸ್
Ashwin RodriguesHead Master St. Johns High School - Kannada Medium
ಸೈಂಟ್ ಜೋನ್ಸ್ ಹಿ. ಪ್ರಾ. ಶಾಲೆ, ಮೂಡಬೆಟ್ಟು ನಾನು ಕಂಡುಕೊAಡ ಹಾಗೆ . . . .
ಸುಮಾರು ೧೨೨ ವರ್ಷಗಳ ಇತಿಹಾಸವುಳ್ಳ ಈ ಶಾಲೆಯು ಶತಮಾನೋತ್ತರ ರಜತ ಮಹೋತ್ಸವವನ್ನು ಆಚರಿಸುವ ಹೊಸ್ತಿಲಿನಲ್ಲಿದೆ.
೧೫ ಶಿಕ್ಷಕರಿದ್ದ ಶಾಲೆಯಲ್ಲಿ ಈಗ ಮೂವರೇ ಖಾಯಂ ಶಿಕ್ಷಕರಿದ್ದಾರೆ. ೭೦೦ ರಿಂದ ೮೦೦ ಮಕ್ಕಳಿದ್ದ ಇದೇ ಶಾಲೆಯಲ್ಲಿ ಈಗ ೧೫೦ ರಿಂದ ೧೭೫ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಂಚಿನ ಛಾವಣಿ ಹೋಗಿ ಟೆರೆಸ್ ಕಟ್ಟಡ ತಲೆಯೆತ್ತಿದೆ. ಧೂಳಿನಿಂದ ಕೂಡಿದ ಶಾಲಾ ಮುಂಭಾಗ ಈಗ ಇಂಟರ್‌ಲಾಕ್ ಹಾಕಿ ಮುಚ್ಚಲ್ಪಟ್ಟಿದೆ.
ನಾನು ಉಡುಪಿ ಸೈಂಟ್ ಮೇರಿಸ್ ಹಿ. ಪ್ರಾ. ಶಾಲೆಯಿಂದ ಆಗಸ್ಟ್ ೨, ೨೦೦೯ ರಂದು ಈ ಶಾಲೆಗೆ ಸಹಶಿಕ್ಷಕಿಯಾಗಿ ವರ್ಗಾವಣೆಗೊಂಡು ಬಂದೆ. ಅಂದು ನನ್ನನ್ನು ಸೇರಿ ೭ ಶಿಕ್ಷಕರಿದ್ದೆವು ಮತ್ತು ೨೭೦ ರಿಂದ ೩೦೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಶಾಲೆಯಲ್ಲಿ ಎಜ್ಮಿ ಟೀಚರ್ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪಠ್ಯಪುಸ್ತಕಗಳು, ಬಿಸಿಯೂಟ ಸರಕಾರದ ವತಿಯಿಂದ ಸಿಗುತ್ತಿತ್ತು. ಈಗಲೂ ಸಿಗುತ್ತದೆ. ಈಗ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಹಾಲು, ರಾಗಿ ಮಿಕ್ಸ್ ಹೀಗೆ ಎಲ್ಲವೂ ಉಚಿತವಾಗಿ ಸಿಗುತ್ತದೆ.
ವಿದೇಶದಲ್ಲಿ ಕೆಲಸ ಮಾಡುತ್ತಿರುವ ಸಹೃದಯಿ ಹಿರಿಯ ವಿದ್ಯಾರ್ಥಿಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುತ್ತಿದ್ದರು ಈಗಲೂ ಮಾಡುತ್ತಿದ್ದಾರೆ. ನಾನು ಬಂದ ಪ್ರಾರಂಭದಲ್ಲಿ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿರುವುದನ್ನು ನೋಡಿದ್ದೆ. ನಾವು ಶಿಕ್ಷಕರು ಸ್ಪರ್ಧೆಗೆ ಬೇರೆ ಬೇರೆ ಶಾಲೆಗಳಿಗೆ ಕರೆದುಕೊಂಡು ಹೋಗುತ್ತಿದ್ದೆವು. ಆಗ ನಾನು ಶಂಕರಪುರ ಎಅI (ಎಚಿsmiಟಿe) ಮತ್ತು ಖoಣಚಿಡಿಚಿಛಿಣ ಅಟub ಇವರನ್ನು ಭೇಟಿ ಮಾಡಿ ಕ್ರೀಡಾ ಸಮವಸ್ತçದ ಬಗ್ಗೆ ಚರ್ಚೆ ಮಾಡಿದಾಗ ಸುಮಾರು ೨೪ ಮಕ್ಕಳಿಗೆ ಕ್ರೀಡಾ ಸಮವಸ್ತç ನೀಡಿ ಸಹಕರಿಸಿದ್ದರು. ಈಗಲೂ ಅದು ಬಳಕೆಯಲ್ಲಿದೆ. ದಾನಿಗಳನ್ನು ಭೇಟಿ ಮಾಡಿ ಮಕ್ಕಳಿಗೆ ಸಿಹಿತಿಂಡಿ, ಸ್ಪರ್ಧೆಗಳಿಗೆ ಹೋಗಲು ವಾಹನದ ಖರ್ಚು, ಶಾಲೆಯಲ್ಲಿ ನಡೆಯುವ ಆಚರಣೆಗಳಿಗೆ ಖರ್ಚು ಹೀಗೆ ಧನ ಸಂಗ್ರಹ ಮಾಡಿ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿತ್ತು. ಈಗಲೂ ಅದು ಚಾಲ್ತಿಯಲ್ಲಿದೆ. ೨೦೧೬ ಅಕ್ಟೋಬರ್ ೩೧ರಂದು ಎಜ್ಮಿ ಟೀಚರ್ ನಿವೃತ್ತರಾದಾಗ ಶ್ರೀಮತಿ ಮಗ್ದಲಿನ್ ಪ್ರಿಸ್ಕಾ ಅವರಿಗೆ ಅಧಿಕಾರ ವಹಿಸಲಾಗಿತ್ತು. ಅವರ ಅನಾರೋಗ್ಯದ ನಿಮಿತ್ತ ಅವರು ಹುದ್ದೆಯನ್ನು ನಿರಾಕರಿಸಿದ ಪ್ರಯುಕ್ತ ಕಥೋಲಿಕ್ ಶಿಕ್ಷಣ ಮಂಡಳಿಯವರು ನನಗೆ ಪ್ರಭಾರ ಮುಖ್ಯ ಶಿಕ್ಷಕರಾಗಿ ನೇಮಕ ಮಾಡಿದರು. ದಾನಿಗಳ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಾಯದಿಂದ ಇಂಟರ್‌ಕೋಮ್ ಮತ್ತು ಧ್ವನಿವರ್ಧಕ ವ್ಯವಸ್ಥೆಯನ್ನು ಸರಿಪಡಿಸಲಾಯಿತು. ಶಾಲಾ ಮಕ್ಕಳಿಗೆ ಊಟ ಮಾಡಿದ ನಂತರ ಕೈ ತೊಳೆಯಲು ಸಿಂಕ್ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯದ ಬಾಗಿಲುಗಳು ಕೋವಿಡ್ ಸಮಯದಲ್ಲಿ ಮುಚ್ಚಿದ್ದ ಕಾರಣ ಗೆದ್ದಲು ಹಿಡಿದು ಬಳಕೆ ಮಾಡಲು ಅಸಾಧ್ಯವಾಗಿದ್ದವು. ರೋಟರಿ ಸಂಸ್ಥೆಯವರ ಸಹಕಾರದಿಂದ ಬಾಗಿಲುಗಳನ್ನು ಮತ್ತು ಹೊರಗಡೆ ಬಾಲಕ/ಬಾಲಕಿಯರ ಶೌಚಾಲಯ ವಿಭಾಜಕವನ್ನು ಅಳವಡಿಸಲಾಗಿದೆ. ಶಾಲೆಗೆ Uಂಇ Pಚಿಟಿgಚಿಟiಣes ರವರ ಸಹಾಯದಿಂದ ಕಛೇರಿ ಮತ್ತು ಶಾಲಾ ಕೆಲಸಗಳಿಗೆ ಕಂಪ್ಯೂಟರ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಿಂಟರ್ ಮತ್ತು ಸ್ಕಾö್ಯನರನ್ನು ಹಿರಿಯ ವಿದ್ಯಾರ್ಥಿಗಳು ವೈಯುಕ್ತಿಕವಾಗಿ ಮತ್ತು ರೋಟರಿಯವರ ಸಹಾಯದಿಂದ ನೀಡಿರುತ್ತಾರೆ. ವಿದ್ಯುತ್ ಕಡಿತಗೊಂಡಾಗ ಕೆಲಸಕ್ಕೆ ತೊಂದರೆಯಗದAತೆ Iಟಿveಡಿಣeಡಿ ವ್ಯವಸ್ಥೆಯನ್ನು ಹಿರಿಯ ವಿದ್ಯಾರ್ಥಿಯವರ ನೇತೃತ್ವದಲ್ಲಿ ಮಾಡಲಾಗಿದೆ. ದಾನಿಗಳ ಸಹಾಯದಿಂದ ಶಾಲಾ ಮಕ್ಕಳಿಗೆ ೨೫ ಊಟದ ತಟ್ಟೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ಲಾಸ್ಟಿಕ್ ಮೇಜುಗಳನ್ನು ತರಲಾಗಿದೆ. ಕ್ರೀಡೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ೭ನೇ ತರಗತಿಗಳ ವಿದ್ಯಾರ್ಥಿಗಳು ಬೀಳ್ಕೊಡುಗೆ ಸಂದರ್ಭದಲ್ಲಿ ಶಾಲೆಗೆ ಫ್ಯಾನ್‌ಗಳನ್ನು ಮತ್ತು ಸಮಾರಂಭಕ್ಕೆ ಬಳಸುವ ೪ ಕುರ್ಚಿಗಳನ್ನು ನೀಡಿರುತ್ತಾರೆ. ಶಾಲಾ ಮಕ್ಕಳು ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಗಿಡಗಳನ್ನು ಮತ್ತು ಶಾಲೆಗೆ ಬೇಕಾಗುವ ಪರಿಕರಗಳನ್ನು ನೀಡಿ ಸಹಕರಿಸುತ್ತಾರೆ. ದಾನಿಗಳ ಸಹಾಯದಿಂದ ಎಲ್ಲಾ ಮಕ್ಕಳಿಗೆ ಣಡಿಚಿಛಿಞ suiಣ ವ್ಯವಸ್ಥೆ ಮಾಡಲಾಗಿದೆ. ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ವ್ಯವಸ್ಥಿತವಾಗಿ ನಡೆಸಲು ಇಲಾಖೆ, ಪಂಚಾಯತ್, ಆಡಳಿತ ಮಂಡಳಿ, ಪೋಷಕರು, ದಾನಿಗಳು, ಶಿಕ್ಷಕರು ಧನಸಹಾಯ ಮತ್ತು ಇತರ ಸಹಾಯ ನೀಡಿ ಸಹಕರಿಸುತ್ತಾರೆ. ಉಳಿದ ಹಣದಿಂದ ಶಾಲೆಗೆ Smಚಿಡಿಣ ಖಿ.ಗಿ ತರಲಾಗಿದೆ. ಸಮಯ ಸಂದರ್ಭಕ್ಕೆ ತಕ್ಕಂತೆ ಮತ್ತು ಆಧುನಿಕತೆಗೆ ಸರಿಹೊಂದುವAತೆ ಮೇಲಿನ ವ್ಯವಸ್ಥೆಗಳನ್ನೆಲ್ಲ ಮಾಡಲಾಗಿದೆ. ಈ ಎಲ್ಲಾ ವ್ಯವಸ್ಥೆಗಳು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಸಹಕರಿಸುತ್ತದೆ.
೨೦೧೯-೨೦ನೇ ಸಾಲಿನಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ಹೆಲೆನ್ ವಿನಯ ಕುಮಾರಿಯವರು ನಿವೃತ್ತರಾಗಿರುತ್ತಾರೆ. ೨೦೨೩-೨೪ನೇ ಸಾಲಿನಲ್ಲಿ ನಿವೃತ್ತ ಶಿಕ್ಷಕರಾದ ಶ್ರೀಯುತ ಹೆರಾಲ್ಡ್ ಡಿಸಿಲ್ವರವರು ಪಾಠ, ಪ್ರವಚನ ಮತ್ತು ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಹಕರಿಸಿದ್ದರು. ೨೦೨೩-೨೪ ಸಾಲಿನಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಶ್ರೀಮತಿ ಮಗ್ದಲಿನ್ ಪ್ರಿಸ್ಕಾರವರು ನಿವೃತ್ತರಾಗಿರುತ್ತಾರೆ. ಪ್ರಸ್ತುತ ಮೂವರು ಖಾಯಂ ಶಿಕ್ಷಕರು ಮತ್ತು ಇಬ್ಬರು ಗೌರವ ಶಿಕ್ಷಕಿಯರು ಕಾರ್ಯ ನಿರ್ವಹಿಸುತ್ತಿದ್ದೇವೆ. ೧೭೫ ಇದ್ದ ಮಕ್ಕಳ ಸಂಖ್ಯೆ ೧೫೦ಕ್ಕೆ ಬರುವ ಸಾಧ್ಯತೆಯಿದೆ. ಶ್ರಮವಹಿಸಿ ದಾಖಲಾತಿ ಹೆಚ್ಚಿಸಲು ಮತ್ತು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಆಗುವಲ್ಲಿ ಶಿಕ್ಷಕರಾದ ನಾವು ಕೈ ಜೋಡಿಸಿ ಈ ಸಂಸ್ಥೆಯು ಇನ್ನು ಬೆಳೆಯಲಿ ಎಂದು ಆಶಿಸುತ್ತೇವೆ.
ಇದೆಲ್ಲವು ಸಾಧ್ಯವಾಗಬೇಕಾದರೆ ಮೊದಲಿನ ಶಾಲಾ ಸಂಚಾಲಕರು, ಆಡಳಿತ ಮಂಡಳಿಯವರು, ಈಗಿನ ಸಂಚಾಲಕರು, ಆಡಳಿತ ಮಂಡಳಿಯವರು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಶಾಲಾಭಿಮಾನಿಗಳು ತಮ್ಮ ಸಲಹೆ ಸೂಚನೆಗಳನ್ನಿತ್ತು ನಮಗೆ ಬೆನ್ನೆಲುಬಾಗಿ ನಿಂತು ಸಹಕರಿಸಿದ್ದಾರೆ. ದೇವರ ಆಶೀರ್ವಾದವು ಸದಾ ನಮ್ಮೆಲ್ಲರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
CLARA IRENE DsouzaHead Master St. Johns Primary School - Kannada Medium