ವಿಲ್ಪ್ರೆಡ್ ಆರ್.,ಪಾಂಗ್ಳಾ

  • ವಿಲ್ಪ್ರೆಡ್ ಆರ್.,ಪಾಂಗ್ಳಾ

    ವಿಲ್ಪ್ರೆಡ್ ಆರ್.,ಪಾಂಗ್ಳಾ

    Batch1993- 1994

    ಹನಿಗವನಗಳು
    ---------------------

    ಆಕೆಗೆ ಕೇಳಿದೆ;

    " ನೀನು ಇನ್ಸ್ಟಾಗ್ರಾಮ್ ( Instagram)ನಲ್ಲಿ ಇದ್ದೀಯ?!"


    ಆಕೆ ಉತ್ತರಿಸಿದಳು;

    " ಮೊದಲು ನೀನು ಎಶ್ಟು ಗ್ರಾಮ್ ಅಂತ ಹೇಳಯ್ಯ" !!

    *************

    ಊರಜನರು

    ಆತನನ್ನು ಕರೆಯುತ್ತಿದ್ದರು

    " ಲಕ್ಕಿ ವ್ಯಾಪಾರಿ" ಯೆಂದು!

    ಕಾರಾಣವೇನೆಂದು ನೋಡುವಾಗ

    ಆತ ಮಾರುತ್ತಿದ್ದದ್ದು...

    ಕ್ವಿಂಟಾಲ್ ಗಟ್ಲೆ " ಅವಲಕ್ಕಿ" ಯನ್ನು !!

    ************

    ವಾರದ ಹಿಂದೆ

    ಸುದ್ದಿಯಾಗಿತ್ತು

    ' ವೀರಪ್ಪನ್' ಸತ್ತನೆಂದು!

    ಇಂದು,

    ನಿಜ ವಿಶಯ ತಿಳಿದು ಬಂತು

    ಸತ್ತಿದ್ದು ' ವೀರಪ್ಪನ್ನ್ ' ಅಲ್ಲ...

    " ವೀರಾಳ ಅಪ್ಪ" ನೆಂದು !!


    **********

    ಒ ಸ್ವಾಮಿ ವೀವೆಕನಂದರೆ....

    ಒ ಮಹಾತ್ಮ ಗಾಂಧಿಯವರೇ....

    ಒ ದೈವ ದೇವರುಗಳೇ....

    ನಿವ್ಯಾಕೇ ನುಡಿಮುತ್ತುಗಳನ್ನ ನುಡಿಯುವಿರಯ್ಯ...!??


    ನಮ್ಮ್ ಜನರಿಗೆ ಈಗ ಕೇಳಲ್ಲ...

    ಉಂಟಾಗಿದೆ ಎಲ್ಲೆಲ್ಲೂ

    ಶಬ್ದ ಮಾಲಿನ್ಯ!!

    ***********

    ಧನಿಕನಿಗೆ

    ಅವನ ಸೊತ್ತು, ಅಸ್ತಿ, ಸಂಪಾದನೆ...

    ಲೆಕ್ಕ ಮಾಡಲು ಪುರ್ಸೊತ್ತಿಲ್ಲ.!

    ಬಡವನಿಗೆ...

    ಧನಿಕನಷ್ಟು

    ಸೊತ್ತಿಲ್ಲ !!

    ********

    ದೀಪಾವಳಿಗೆ 

    ನಾನು ಮನೆಗೆ ತರೋಲ್ಲ

    ಯಾವುದೇ ಸಿಡಿಮದ್ದು- ಪಟಾಕಿ!

    ಹೆಂಡತಿ ಸಿಡಿದ್ರೆ ಸಾಕು

    ಉಳಿಯೊಲ್ಲ ಬೇರೆ ಏನು ಬಾಕಿ!!


    ********

    ವಿಲ್ಪ್ರೆಡ್ ಆರ್.,ಪಾಂಗ್ಳಾ- ಶಂಕರಪುರ.